ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರವೂ ಸಾಧಾರಣ ಮಳೆಯಾಗಿದೆ.
ಸೋಮವಾರ ಗುಡುಗು, ಸಿಡಿಲಿನ ಆರ್ಭಟ ಅಧಿಕವಾಗಿತ್ತು. ಸಿಡಿಲಿಗೆದೇವರಹಿಪ್ಪರಗಿ ತಾಲ್ಲೂಕಿನ ಪಡಗಾನೂರ ಗ್ರಾಮದ ಲಕ್ಷ್ಮೀಬಾಯಿ ಅರ್ಜುನ ತಳವಾರ(50) ಜೀವ ತೆತ್ತಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪೂರ ಪಿ.ಟಿ.ಗ್ರಾಮದಲ್ಲಿ ಗಿಡಕ್ಕೆ ಕಟ್ಟಿದ್ದ ಎಮ್ಮೆಗೆ ಸಿಡಿಲು ಬಡಿದು ಸಾವಿಗೀಡಾಗಿದೆ.
ವಿಜಯಪುರ ನಗರದಲ್ಲಿ ಗುಡುಗು, ಸಿಡಿಲಿನೊಂದಿಗೆ ಸಾಧಾರಣ ಮಳೆಯಾಯಿತು. ಯುಗಾದಿ ಖರೀದಿಗೆ ಅಡಚಣೆಯಾಯಿತು. ತಿಕೋಟಾ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಮಳೆಯಿಂದ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.