ADVERTISEMENT

ಸಹಕಾರಿ ಬ್ಯಾಂಕ್ ಚುನಾವಣೆ:ಲಾಭದತ್ತ ಕೊಂಡೊಯ್ದ ಹಾಲಿ ಬಣ ಬೆಂಬಲಿಸಿ–ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 7:44 IST
Last Updated 12 ಅಕ್ಟೋಬರ್ 2025, 7:44 IST
ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ, ಪಟ್ಟಣದಲ್ಲಿ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿ ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ, ಪಟ್ಟಣದಲ್ಲಿ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿ ಮಾತನಾಡಿದರು.   

ಬಸವನಬಾಗೇವಾಡಿ : ಶತಮಾನದ ಇತಿಹಾಸ ಹೊಂದಿರುವ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ ಷೇರುದಾರ ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಬಣವನ್ನು ಆಯ್ಕೆ ಮಾಡುವಂತೆ ಸಚಿವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.

ಪಟ್ಟಣದ ಬಸವಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಸಿದ್ಧೇಶ್ವರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕಿನ ಮತದಾರ ಷೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಸಿದ್ದೇಶ್ವರ ಸಹಕಾರ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆ ಆಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದ ಹಾಲಿ ಆಡಳಿತ ಮಂಡಳಿ ತಂಡವನ್ನೇ ಆಯ್ಕೆ ಮಾಡುವಂತೆ ಕೋರಿದರು.

ADVERTISEMENT

ಲಾಭದಲ್ಲಿರುವ ಸದರಿ ಬ್ಯಾಂಕಿಗೆ ಚುನಾವಣೆ ವೆಚ್ಚ ತಪ್ಪಿಸಲು ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ದುರ್ದೈವದಿಂದ ಚುನಾವಣೆ ಎದುರಾಗಿದೆ. ಹೀಗಾಗಿ ಹಾಲಿ ಪ್ಯಾನಲ್ ಗೆಲ್ಲಿಸುವ ಮೂಲಕ ಸಹಕಾರ ರಂಗದ ಸಿದ್ದೇಶ್ವರ ಬ್ಯಾಂಕ್ ಹಿರಿಮೆ ಹೆಚ್ಚಿಸಿ ಎಂದು ಮನವಿ ಮಾಡಿದರು.

ಸಹಕಾರಿ ರಂಗದ ಪ್ರಮುಖರಾದ ಅಧ್ಯಕ್ಷ ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಿ.ಎಸ್‌. ಪಾಟೀಲ ಯಾಳಗಿ, ಐ.ಸಿ. ಪಟ್ಟಣಶೆಟ್ಟಿ, ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ, ಅನಿಲ ದುಂಬಾಳೆ, ಸತೀಶ ಓಸ್ವಾಲ, ಸುರೇಶ ಹಾರಿವಾಳ, ತಾನಾಜಿ ನಾಗರಾಳ, ಪ್ರೇಮು ಮ್ಯಾಗೇರಿ, ಬಾಲಚಂದ್ರ ಮುಂಜಾನೆ, ಅಣ್ಣುಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಲಿ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಸ್ಪರ್ಧಿಗಳಾದ ವಿಜಯಕುಮಾರ ಇಜೇರಿ, ಐ.ಎಂ.ಪಟ್ಟಣಶೆಟ್ಟಿ, ವೈಜನಾಥ ಕರ್ಪೂರಮಠ, ಹರ್ಷಗೌಡ ಪಾಟೀಲ, ಡಾ.ಸಂಜೀವ ಪಾಟೀಲ ಮುಳವಾಡ, ಗುರು ಗಚ್ಚಿನಮಠ, ಬೋರಮ್ಮ ಗೊಬ್ಬೂರ, ಸೌಭಾಗ್ಯ ಭೋಗಶೆಟ್ಟಿ, ಕರುಣಾ ಅವರಂಗಾಬಾದ್, ಸುರೇಶ ಗಚ್ಚಿನಕಟ್ಟಿ, ರಮೇಶ ಬಿದನೂರು, ಪ್ರಕಾಶ ಬಗಲಿ, ಗುರುರಾಜ ಗಂಗನಹಳ್ಳಿ, ರಾಜು ಕತ್ತಿ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ಸಾಯಬಣ್ಣ ಭೋವಿ, ಅಮೋಘಸಿದ್ಧ ನಾಯ್ಕೋಡಿ ಇದ್ದರು.

ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮತದಾರ ಷೇರುದಾರರು ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.