ADVERTISEMENT

ವಿಜಯಪುರ | ಮತ್ತಿಬ್ಬರಿಗೆ ಕೋವಿಡ್-19 ದೃಢ

​ಪ್ರಜಾವಾಣಿ ವಾರ್ತೆ
Published 22 ಮೇ 2020, 8:34 IST
Last Updated 22 ಮೇ 2020, 8:34 IST

ವಿಜಯಪುರ: ಇಲ್ಲಿನ ಕಂಟೈನ್ಮೆಂಟ್ ಪ್ರದೇಶದ ಇಬ್ಬರು ನಿವಾಸಿಗಳಿಗೆ ಶುಕ್ರವಾರ ಕೋವಿಡ್ ಸೋಂಕು ತಗುಲಿದೆ.

33 ಮತ್ತು 34 ವರ್ಷ ವಯಸ್ಸಿನ ಇಬ್ಬರು ಪುರುಷರಿಗೆ ಸೋಂಕು ದೃಡವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 63 ಜನರಿಗೆ ಕೊರೊನಾವೈರಸ್‌ಸೋಂಕು ತಗುಲಿದೆ. ಇದರಲ್ಲಿ ನಾಲ್ಕು ಜನ ಸಾವಿಗೀಡಾಗಿದ್ದು, 41 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿವಿಧ ರಾಜ್ಯಗಳಿಂದ ಜಿಲ್ಲೆಗೆ 17,626 ಜನ ಆಗಮಿಸಿದ್ದು, ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.