ADVERTISEMENT

ವಿಜಯಪುರ: ಕೊರೊನಾದಿಂದ ವೃದ್ಧೆ ಸಾವು

ಇನ್ನೂರರತ್ತ ವಿಜಯಪುರ ದಾಪುಗಾಲು; 76 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 12:59 IST
Last Updated 6 ಜೂನ್ 2020, 12:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ನಗರದ ಕಂಟೈನ್ಮೆಟ್‌ ಝೋನ್‌ನ 82 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಕೋವಿಡ್‌ 19ರಿಂದ ಸಾವಿಗೀಡಾಗಿದ್ದಾರೆ.

ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯು ಮೇ 27ರಂದೇ ಅವರ ಮನೆಯಲ್ಲೇ ಸಾವಿಗೀಡಾಗಿದ್ದರು. ಅವರ ಗಂಟಲುದ್ರವ ಮಾದರಿ ಪರೀಕ್ಷೆ ಫಲಿತಾಂಶ ಶನಿವಾರ ಪಾಸಿಟಿವ್‌ ಎಂದು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ 19ರಿಂದ ಆರು ಜನ ಸಾವಿಗೀಡಾಗಿದ್ದಾರೆ.

ಮತ್ತೆ ಆರು ಜನರಿಗೆ ದೃಢ: ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸ್ಸಾಗಿದ್ದ 25 ವರ್ಷ ವಯಸ್ಸಿನ ಮಹಿಳೆ ಮತ್ತು 40 ವರ್ಷ ವಯಸ್ಸಿನ ವ್ಯಕ್ತಿ ಹಾಗೂ ವಿಜಯಪುರದ ಕಂಟೈನ್ಮೆಂಟ್‌ ಝೋನ್‌ ಸಂಪರ್ಕದಿಂದ 30, 38 ವರ್ಷದ ಇಬ್ಬರು ಪುರುಷರು ಮತ್ತು 42 ಮತ್ತು 82 ವರ್ಷ(ಮೃತಪಟ್ಟಿರುವ ವೃದ್ಧೆ) ವಯಸ್ಸಿನ ಮಹಿಳೆಯರಿಬ್ಬರಿಗೆ ಸೋಂಕು ದೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದ್ದು, ಕೋವಿಡ್‌ ಪೀಡಿತರ ಸಂಖ್ಯೆ ದ್ವಿಶತಕದತ್ತ ದಾಪು ಗಾಲು ಇಟ್ಟಿದೆ.

ADVERTISEMENT

ಈಗಾಗಲೇ 76 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನೂ 111 ಜನ ಸಕ್ರಿಯ ರೋಗಿಗಳು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.