ADVERTISEMENT

ಮುದ್ದೇಬಿಹಾಳ | ಶಾಸಕ ಸಿ.ಎಸ್.ನಾಡಗೌಡ ವಿರುದ್ಧ ಅವಹೇಳನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:42 IST
Last Updated 31 ಆಗಸ್ಟ್ 2025, 5:42 IST
   

ಮುದ್ದೇಬಿಹಾಳ: ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಶಾಸಕ ಸಿ.ಎಸ್.ನಾಡಗೌಡ ಹಾಗೂ ಅವರ ಪುತ್ರಿ ಪಲ್ಲವಿ ನಾಡಗೌಡ ಬಗ್ಗೆ ಹಗುರವಾಗಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪಲೋಡ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಿಪಿಐ ಮೊಹ್ಮದ ಫಸಿಯುದ್ದೀನ್‌, ವಾಲ್ಮೀಕಿ ನಗರದ ನಿವಾಸಿ ರಾಮಣ್ಣ ಮಲ್ಲಪ್ಪ ನಾಯ್ಕ ಮಕ್ಕಳ ಎಂಬುವರಿಗೆ ಮಹೆಬೂಬ ನಗರದ ನಿವಾಸಿ ಅಲ್ಲಾಭಕ್ಷ ಎಚ್.ತಾರಾಗರ ಎಂಬಾತ ‘ಶಾಸಕರು, ಅವರ ಪುತ್ರಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದೇಕೆ’ ಎಂದು ಪ್ರಶ್ನಿಸಿದ್ದಕ್ಕೆ ‘ನನ್ನನ್ನು ಜೀವ ಸಹಿತ ಉಳಿಸುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಅಲ್ಲದೆ, ಆರೋಪಿ ವಿರುದ್ದ ಬಿಎನ್‌ಎಸ್ ಕಾಯ್ದೆ 59,351(2),353(2)ರನ್ವಯ ದೂರು ದಾಖಲಾಗಿದೆ.ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.