ADVERTISEMENT

ದೋಷಮುಕ್ತ ಮತದಾರರ ಪಟ್ಟಿ: ಡಿಸಿ

​ಪ್ರಜಾವಾಣಿ ವಾರ್ತೆ
Published 2 ಮೇ 2022, 14:51 IST
Last Updated 2 ಮೇ 2022, 14:51 IST
ವಿಜಯಪುರ ನಗರ ಮತಕ್ಷೇತ್ರದಲ್ಲಿ ನಿಖರವಾದ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಸೋಮವಾರ ಮನೆಮನೆ ಸಮೀಕ್ಷೆ ಮತ್ತು ಪಿಎಸ್ಇ ಪರಿಶೀಲಿಸುವ ಕಾರ್ಯದ ಪ್ರಗತಿ ಪರಿಶೀಲಿಸಿದರು
ವಿಜಯಪುರ ನಗರ ಮತಕ್ಷೇತ್ರದಲ್ಲಿ ನಿಖರವಾದ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಸೋಮವಾರ ಮನೆಮನೆ ಸಮೀಕ್ಷೆ ಮತ್ತು ಪಿಎಸ್ಇ ಪರಿಶೀಲಿಸುವ ಕಾರ್ಯದ ಪ್ರಗತಿ ಪರಿಶೀಲಿಸಿದರು   

ವಿಜಯಪುರ: ವಿಜಯಪುರ ನಗರ ಮತಕ್ಷೇತ್ರದಲ್ಲಿ ನಿಖರವಾದ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಸೋಮವಾರಮನೆಮನೆ ಸಮೀಕ್ಷೆ ಮತ್ತು ಪಿಎಸ್ಇ ಪರಿಶೀಲಿಸುವ ಕಾರ್ಯದಪ್ರಗತಿ ಪರಿಶೀಲಿಸಿದರು.

ನಗರ ಮತಕ್ಷೇತ್ರದಲ್ಲಿ ಭಾಗ ಸಂಖ್ಯೆ -2 (ಕೆ.ಎಚ್.ಬಿ ಕಾಲೊನಿ) ಮತ್ತು ಭಾಗ ಸಂಖ್ಯೆ -3 (ಆದರ್ಶ ನಗರ)ರಲ್ಲಿ ಸ್ಥಳ ತನಿಖೆ ಕೈಗೊಂಡು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ನಿಖರವಾದ ಮತ್ತು ದೋಷ - ಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ವಿಜಯಪುರ ನಗರ ವ್ಯಾಪ್ತಿಯಲ್ಲಿ ನಿಖರವಾದ ಮತ್ತು ದೋಷ - ಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವುದಕ್ಕಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಮತ್ತು ಬಿಎಲ್‌ಓ ಮೇಲ್ವಿಚಾರಕರ ತರಬೇತಿಯನ್ನು ಮಾರ್ಚ್‌ 25ರಂದು ವಿಜಯಪುರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಭೆ ಜರುಗಿಸಿ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದರು.

ADVERTISEMENT

ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ - ಮನೆ ಸಮೀಕ್ಷೆ ಕಾರ್ಯ ಮತ್ತು ಪಿಎಸ್ಇ (ಫೋಟೊ ಸಿಮಿಲರ್ ಏಂಟ್ರಿ ) ಚೆಕ್‌ಲಿಸ್ಟ್‌ಗಳನ್ನು ಪರಿಶೀಲಿಸುವ ಕಾರ್ಯ ಜರುಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.