ಸಿಂದಗಿ: ತಾಲ್ಲೂಕಿನ ಗುಬ್ಬೇವಾಡ ಗ್ರಾಮದ ಶಾಲಾ ಆವರಣದಲ್ಲಿ ₹1.10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.
ತಾಲ್ಲೂಕಿನ ಡಂಬಳ– ಗುಬ್ಬೇವಾಡದಿಂದ ಬಾರಖೇಡ– ಬೀಳಗಿ ರಾಜ್ಯ ಹೆದ್ದಾರಿ–124 ಗೆ ಕೂಡು ರಸ್ತೆಗೆ ₹75 ಲಕ್ಷ ವೆಚ್ಚದ ರಸ್ತೆ ಸುಧಾರಣೆ, ಗುಬ್ಬೇವಾಡ ಗ್ರಾಮದಲ್ಲಿ ₹25 ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಅದೇ ಗ್ರಾಮದ ಅಲ್ಪಸಂಖ್ಯಾತರ ಸಮುದಾಯದ ಖಬರಸ್ಥಾನ ಅಭಿವೃದ್ಧಿಗಾಗಿ ₹10 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಾನಂದ ಕೋಟಾರಗಸ್ತಿ, ತಾಲ್ಲೂಕು ಕೆಡಿಪಿ ಸದಸ್ಯ ನಿಂಗೂ ಬುಳ್ಳಾ, ರಮೇಶ ಗುಬ್ಬೇವಾಡ, ರವಿರಾಜ ದೇವರಮನಿ, ನಿತ್ಯಾನಂದ ಕಟ್ಟಿಮನಿ, ಮಾಂತು ಮಳ್ಳಿ, ಶಂಕರ ತೆಲಗಾಣಿ, ಹಸನ್ ಪಟೇಲ ಬಿರಾದಾರ, ಚೇತನಗೌಡ ಬಿರಾದಾರ, ಶರಣು ಕೊಂಡಗೂಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.