ಸಿಂದಗಿ: ಧರ್ಮಸ್ಥಳದ ಬಗ್ಗೆ ನಡೆಸಿದ ಅಪಪ್ರಚಾರ ಷಡ್ಯಂತ್ರದಲ್ಲಿ ರಾಜ್ಯ ಸರ್ಕಾರದ ಕೈವಾಡ ಇದೆ. ಸರ್ಕಾರದಿಂದ ಹಿಂದೂ ಧರ್ಮದ ಕ್ಷೇತ್ರಗಳ ಮೇಲೆ ಗದಾಪ್ರಹಾರ ಮುಂದುವರೆದಿರುವುದು ಖಂಡನೀಯ. ಈ ಕುರಿತು ಎನ್ಐಎ ತನಿಖೆಗೆ ವಹಿಸಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಆಗ್ರಹಿಸಿದರು.
ವಿಜಯಪುರ ಸಿದ್ಧೇಶ್ವರ ರಕ್ತ ಭಂಡಾರದ ಸಹಯೋಗದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಗಜಾನನ ಯುವಕ ಮಂಡಳಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ತಿಕ್ ಹಂಚಿನಾಳ, ಶ್ರೀಧರ ಮಲ್ಲೇದ, ನಿಖಿಲ್ ಪಾಟೀಲ, ಸೋಮೂ ಕೊಪ್ಪ, ಅಕ್ಷಯ ಈಳಗೇರ, ಭಾಗಣ್ಣ ಚೋರಗಸ್ತಿ, ಶಿವೂ ಕಡಕೋಳ, ವಿನಾಯಕ ಜೋಗೂರ, ಸಿದ್ದು ದೇವಣಿ, ರಾಹುಲ್ ರಾಂಪೂರ, ರಾಕೇಶ ಪಟ್ಟಣಶೆಟ್ಟಿ, ಸಂಗೂ ರತ್ನಾಕರ ಸೇರಿದಂತೆ ಒಟ್ಟು 43 ಜನ ಯುವಕರು ರಕ್ತದಾನ ಮಾಡಿದರು.
ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬಿಜೆಪಿ ಜಿಲ್ಲಾ ಪ್ರಮುಖ ಸುರೇಶ ಬಿರಾದಾರ, ಪೀರೂ ಕೆರೂರ ಮತ್ತು ಗಜಾನನ ಮಂಡಳಿ ಪ್ರಮುಖರಾದ ಗುಂಡು ಹೊಸಮನಿ, ಸಿದ್ದು ಲಕ್ಕುಂಡಿ, ಅರುಣ ಬಿರಾದಾರ, ರೋಣಿತ ನಾಯಕ, ಪ್ರದೀಪ ಮಿರಗಿ, ಕುಮಾರ ಪಟ್ಟಣಶೆಟ್ಟಿ ಇದ್ದರು. ಸಾರ್ವಜನಿಕರಿಗೆ ಗಣೇಶೋತ್ಸವ ಆಚರಣೆ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.