ADVERTISEMENT

ಸಿಂದಗಿ | ಆಲಮೇಲದಲ್ಲಿ ಅಂಗವಿಕಲರ ಭವನ ನಿರ್ಮಾಣ-ಶಾಸಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:50 IST
Last Updated 5 ಡಿಸೆಂಬರ್ 2025, 6:50 IST
ಸಿಂದಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಗುರುವಾರ ಶಾಸಕ ಅಶೋಕ ಮನಗೂಳಿ ಅವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅರ್ಹ ಅಂಗವಿಕಲರಿಗೆ ಇಂಧನಚಾಲಿತ ತ್ರಿಚಕ್ರವಾಹನ ವಾಹನ ವಿತರಿಸಿದರು. 
ಸಿಂದಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಗುರುವಾರ ಶಾಸಕ ಅಶೋಕ ಮನಗೂಳಿ ಅವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅರ್ಹ ಅಂಗವಿಕಲರಿಗೆ ಇಂಧನಚಾಲಿತ ತ್ರಿಚಕ್ರವಾಹನ ವಾಹನ ವಿತರಿಸಿದರು.    

ಸಿಂದಗಿ: ಈ ಹಿಂದೆ ಮತಕ್ಷೇತ್ರದ ಆಲಮೇಲ ಪಟ್ಟಣದಲ್ಲಿ ಅಂಗವಿಕಲರ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾವೇಶದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆಲಮೇಲ ಪಟ್ಟಣದಲ್ಲಿ ಅಂಗವಿಕಲರ ಭವನ ನಿರ್ಮಾಣಕ್ಕಾಗಿ ನಿವೇಶನ ಗುರುತಿಸಲಾಗಿದೆ. ಜೊತೆಗೆ ಸರ್ಕಾರ ₹ 20 ಲಕ್ಷ ಅನುದಾನ ಮಂಜೂರುಗೊಳಿಸಿದೆ. ಮುಂದಿನ ವಾರ ಭವನದ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 14 ಜನ ಅಂಗವಿಕಲರಿಗೆ ಇಂಧನಚಾಲಿತ ತ್ರಿಚಕ್ರವಾಹನ ವಿತರಿಸಿ ಮಾತನಾಡಿದರು. ಈಗಾಗಲೇ 483 ಜನ ಅಂಗವಿಕಲರಿಗೆ ಜೀವನೋಪಯೋಗಿ ವಸ್ತುಗಳುಳ್ಳ ಕಿಟ್ ವಿತರಣೆ ಮಾಡಲಾಗಿದೆ. ಅಲ್ಲದೇ ಈ ಹಿಂದೆ 29 ಜನ ಅಂಗವಿಕರಿಗೆ ಇಂಧನಚಾಲಿತ ತ್ರಿಚಕ್ರವಾಹನ ವಿತರಣೆ ಮಾಡಲಾಗಿದೆ. ಇನ್ನೂ 16 ತ್ರಿಚಕ್ರವಾಹನಗಳು ಮಂಜೂರುಗೊಂಡಿವೆ ಎಂದು ತಿಳಿಸಿದರು.

ಪುರಸಭೆ ನಾಮನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ ಮಾತನಾಡಿ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಬಹುತೇಕ ಶಾಸಕರು ಗುಡಿ, ಗುಂಡಾರುಗಳಿಗೆ ಹಾಕುವುದು ಸಾಮಾನ್ಯ. ಆದರೆ ಸಿಂದಗಿ ಶಾಸಕರು ಈ ಅನುದಾನವನ್ನು ಅಂಗವಿಕಲರಿಗೆ ಹೆಚ್ಚಿನ ಪಾಲು ಬಳಕೆ ಮಾಡಿರುವುದು ಅಭಿನಂದನಾರ್ಹ ಕಾರ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡವರು ಮಾತ್ರ ಅಂಗವಿಕರ ಬಗ್ಗೆ ವಿಶೇಷ ಕಾಳಜಿ ವಹಿಸಬಹುದಾಗಿದೆ ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ರಾಮು ಜಿ.ಅಗ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ ಕೆ., ಜಿಲ್ಲಾ ಕೆಡಿಪಿ ಸದಸ್ಯ ಶಿವಾನಂದ ಕೊಟಾರಗಸ್ತಿ ಹಾಗೂ ತಾಲ್ಲೂಕು ಕೆಡಿಪಿ ಸದಸ್ಯ ಅಯ್ಯಪ್ಪ ಕಟ್ಟಿಮನಿ,ಸುರೇಶ ಚೌಧರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸುನಂದಾ ಯಂಪೂರೆ, ರಜತ ತಾಂಬೆ, ಮೋಹಸೀನ ಬೀಳಗಿ, ಬಾಬು ನಾಟೀಕಾರ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಅಂಬರೀಶ ಚೌಗಲೆ, ಗೋಲಗೇರಿ ಹತ್ತರಕಿಹಾಳ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.