ADVERTISEMENT

ಗಣೇಶ ಮೂರ್ತಿಗಳ ವಿಸರ್ಜನೆ: ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 12:51 IST
Last Updated 8 ಸೆಪ್ಟೆಂಬರ್ 2022, 12:51 IST
ವಿಜಯಪುರ ನಗರದ  ಜೋರಾಪುರ ಪೇಟೆಯಲ್ಲಿ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ಸಂಕಲ್ಪ ಸಿದ್ಧಿ ಗಣಪತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು
ವಿಜಯಪುರ ನಗರದ  ಜೋರಾಪುರ ಪೇಟೆಯಲ್ಲಿ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ಸಂಕಲ್ಪ ಸಿದ್ಧಿ ಗಣಪತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು   

ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳಿ ಹಾಗೂಜೋರಾಪುರ ಪೇಟೆಯಲ್ಲಿ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ‘ಸಂಕಲ್ಪ ಸಿದ್ಧಿ’ಗಣಪತಿಯ ವಿಸರ್ಜನಾ ಮೆರವಣಿಗೆ ವೈಭವದಿಂದ ನಡೆಯಿತು.

ಶಿವಾಜಿ ವೃತ್ತದ ಶ್ರೀ ಗಜಾನನ ಉತ್ಸವ ಮಹಾಮಂಡಳಿ ಆಯೋಜಿಸಿದ್ದ ವಿಸರ್ಜನಾ ಮೆರವಣಿಗೆಯಲ್ಲಿ ಪುಣೆಯ ಡೊಳ್ಳಿನ ಕಲಾವಿದರ ಆಕರ್ಷಕ ನೃತ್ಯ, ಕರಡಿ ಮಜಲು, ವಾದ್ಯ ವೈಭವದೊಂದಿಗೆ ಮೆರವಣಿಗೆ ನಡೆಯಿತು. ಭಕ್ತರ ಜಯಘೋಷ ಮೊಳಗಿತು. ಮೆರವಣಿಗೆಯಲ್ಲಿಆನೆ ಗಮನ ಸೆಳೆಯಿತು.

ಶಿವಾಜಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಗಾಂಧಿವೃತ್ತ, ಸರಾಫ್ ಬಜಾರ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಾಗಿ ಮೀನಾಕ್ಷಿ ಚೌಕಿ ಮೂಲಕ ತಾಜ್ ಬಾವಡಿಯಲ್ಲಿ ಸಂಪನ್ನಗೊಂಡಿತು.

ADVERTISEMENT

ಸಾಧಕರಿಗೆ ಸನ್ಮಾನ:

ಖ್ಯಾತ ಕ್ರೀಡಾಪಟು ಅಲ್ಕಾ ಪಡತಾರೆ, ಹರ್ಯಾಣಾದಲ್ಲಿ ನಡೆದ ಸೈಕ್ಲಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆದ ಅಂಕಿತಾ ರಾಠೋಡ, ಅಂತರರಾಷ್ಟ್ರೀಯ ಸೈಕ್ಲಿಂಗ್‍ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ ಸಹನಾ ಕುಡಿಗನೂರ, ದುಬೈನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ಮಾಡಿದ ದೀಕ್ಷಾ ಭೀಸೆ, ದೀಪಾ ಬೀಸೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಬ್ರಹ್ಮಾನಂದ ಮಹಾಸ್ವಾಮೀಜಿ, ಅದ್ವೈತಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಕಾರಜೋಳ, ಚಾಣಕ್ಯ ಕೆರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ. ಬಿರಾದಾರ,ಪ್ರಮುಖರಾದ ಪ್ರಕಾಶ ಅಕ್ಕಲಕೋಟ, ಸದಾಶಿವ ಪವಾರ, ಕಲ್ಲುಗೌಡ ಹರನಾಳ, ಕಾಸುಗೌಡ ಬಿರಾದಾರ. ಸುರೇಶ ಬಿರಾದಾರ ಇದ್ದರು.

ಯತ್ನಾಳ ಚಾಲನೆ:

ಜೋರಾಪುರ ಪೇಟೆಯಲ್ಲಿ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ‘ಸಂಕಲ್ಪ ಸಿದ್ಧಿ’ ಗಣಪತಿಯ ವಿಸರ್ಜನಾ ಮೆರವಣಿಗೆಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಚಾಲನೆ ನೀಡಿದರು.

ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸಿದ್ಧೇಶ್ವರ ಸಂಸ್ಥೆಯ ಚೇರ್ಮನ್‌ ಬಸಯ್ಯ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಭುಲಿಂಗ ಹೇರಲಗಿ, ಮಂಡಳಿಯ ಅಧ್ಯಕ್ಷ ಶಂಕರ ಮಿರ್ಜಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ್, ಸಂಗಪ್ಪ ಹೇರಲಗಿ, ಪರಶುರಾಮ್ ರಜಪೂತ್, ವಿಶ್ವನಾಥ್ ಬೀಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.