
ವಿಜಯಪುರ: ‘ಯುವಕರಲ್ಲಿ ಸಾಮಾನ್ಯವಾಗಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹೆಚ್ಚಾಗುವುದರಿಂದ ದೈಹಿಕ, ಮಾನಸಿಕ ಬದಲಾವಣೆಗಳು ಸಂಭವಿಸುತ್ತವೆ’ ಎಂದು ವೈದ್ಯ ಡಾ. ಮೋಹನ ಹೇಳಿದರು.
ನಗರದ ಎಸ್ ಕುಮಾರ್ಸ್ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಎಸ್ ಕುಮಾರ್ಸ್ ಮಹೇಶ ಪಿಯು ಸೈನ್ಸ್ ಕಾಲೇಜ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಉಪನ್ಯಾಸ ನೀಡಿದರು.
‘ಯುವಕರಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆಗಳಿಂದ ಅವರು ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅವುಗಳ ಪರಿಹಾರಕ್ಕಾಗಿ ತಜ್ಞವೈದ್ಯರಿಂದ ಮಾಹಿತಿ ಪಡೆದು ಸಮತೋಲನ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಓದುವುದು, ಕ್ರಿಡೆಗಳಲ್ಲಿ ತೊಡಗುವುದು, ಸಂಗೀತ ಆಲಿಸುವುದು ಅವಶ್ಯವಿದ್ದಲ್ಲಿ ಮನಃ ಶಾಸ್ತ್ರಜ್ಞರ ಸಲಹೆ ಸೂಚನೆಯನ್ನು ಪಡೆಯುವುದು ಅವಶ್ಯಕ’ ಎಂದರು.
ಡಾ. ಸ್ವಾತಿ ಕೆ. ಮಾತನಾಡಿ, ‘ಪ್ರೌಢಾವಸ್ಥೆಯ ಹದಿಹರೆಯದ ಯುವತಿಯರು ದೈಹಿಕ, ಮಾನಸಿಕ, ಭಾವನಾತ್ಮಕ, ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಾರೆ. ವೇಗವಾಗಿ ಬೆಳೆಯುವ ದೇಹದ ಬಗ್ಗೆ ಅತೃಪ್ತಿ ಹಾರ್ಮೋನ್‌ಗಳ ಬೆಳವಣಿಗೆಯ ಬದಲಾವಣೆಯಿಂದ ಮಾನಸಿಕ ಏರಿಳಿತಗಳು ಮುಟ್ಟಿನ ತೊಂದರೆಗಳು ದೇಹದ ಚಿತ್ರಣದ ಬ್ಗಗೆ ಕಾಳಜಿ. ಇವುಗಳ ಬ್ಗಗೆ ಸೂಕ್ತ ತಿಳಿವಳಿಕೆ, ಬೆಂಬಲ ಮತ್ತು ಮಾರ್ಗದರ್ಶನದಿಂದ ಸಕಾರಾತ್ಮಕವಾಗಿ ನಿಭಾಯಿಸಬಹುದು’ ಎಂದರು.
ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ್, ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ, ಡಾ.ಪೂರ್ವಿ ಪಾಟೀಲ, ಡಾ. ತಿರುಮಲ್ ಕುಲಕರ್ಣಿ, ಡಾ. ಶಿವಲೀಲಾ ದೇವರಮನಿ, ಕಾಲೇಜಿನ ಪ್ರಾಚಾರ್ಯ ಸದಾಶಿವ ವಾಲಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.