ADVERTISEMENT

ಡೊಮನಾಳ ಗುಡ್ಡ ಹಸಿರಿಕರಣಕ್ಕೆ ನೆರವು: ಸಿಇಒ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 12:29 IST
Last Updated 16 ಜೂನ್ 2021, 12:29 IST
ವಿಜಯಪುರ ತಾಲ್ಲೂಕಿನ ಡೊಮನಾಳ ಗುಡ್ಡದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟರು. ಡಾ.ಮಹಾಂತೇಶ ಬಿರಾದಾರ, ಡಿಸಿಎಫ್‌ ಸರೀನಾ ಸಿಕ್ಕಲಗಾರ ಇದ್ದಾರೆ
ವಿಜಯಪುರ ತಾಲ್ಲೂಕಿನ ಡೊಮನಾಳ ಗುಡ್ಡದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟರು. ಡಾ.ಮಹಾಂತೇಶ ಬಿರಾದಾರ, ಡಿಸಿಎಫ್‌ ಸರೀನಾ ಸಿಕ್ಕಲಗಾರ ಇದ್ದಾರೆ   

ವಿಜಯಪುರ: ತಾಲ್ಲೂಕಿನ ತಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡೊಮನಾಳ ಗುಡ್ಡದಲ್ಲಿ ನಡೆದಿರುವ ಹಸಿರಿಕರಣ ಕಾರ್ಯಕ್ಕೆ ಎಲ್ಲ ರೀತಿಯ ನೇರವು ನೀಡುವುದಾಗಿಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಭರವಸೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುಡ್ಡದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ನಿವೃತ್ತ ಉಪ ತಹಶೀಲ್ದಾರ್‌ ಎನ್.ಡಿ.ಪಾಟೀಲ್ ಅವರ ಮತ್ತು ತಂಡದಹಸಿರಿಕರಣ ಕಾರ್ಯವನ್ನು ಶ್ಲಾಘಿಸಿದರು.

ADVERTISEMENT

ವಿಜಯಪುರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಡಾ.ಬಾಬು ಸಜ್ಜನ ಮಾತನಾಡಿ, ಗುಡ್ಡದಲ್ಲಿ 37 ಪ್ರಭೇದದ ಸಸ್ಯಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳಿಗೆ ಎನ್.ಡಿ. ಪಾಟೀಲ್ ನೇತೃತ್ವವನ್ನು ವಹಿಸಿದ್ದಾರೆ ಎಂದರು.

ಗುಡ್ಡದ ಮೇಲಿರುವ ದಾವಲ್ ಮಲ್ಲಿಕ್‌ ದರ್ಗಾದಲ್ಲಿ ಅತಿಥಿಗಳು ಪೂಜೆ ಸಲ್ಲಿಸಿದರು.

ಡಾ.ಮಹಾಂತೇಶ ಬಿರಾದಾರ, ಡಿಸಿಎಫ್‌ ಸರೀನಾ ಸಿಕ್ಕಲಗಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಬಿ. ಬಿರಾದಾರ, ಡಾ.ಮುರಗೇಶ ಪಟ್ಟಣಶೆಟ್ಟಿ, ನಿವೃತ್ತ ಎಂಜಿನಿಯರ್‌‌ ಎಸ್.ಎ.ಪಾಟೀಲ, ತಿಡಗುಂದಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮನಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರುಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.