ವಿಜಯಪುರ:ಜಲಸಂಪನ್ಮೂಲ ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ಗೆ ಸ್ಥಳೀಯ ಮುಖಂಡರು ಭಾನುವಾರ ಬಳೂತಿ ಜಾಕ್‌ವೆಲ್ ಬಳಿ ಹೂವಿನ ಹಾರ ಹಾಕಲು ಮುಂದಾದಾಗ; ಸುಗಂಧರಾಜ ಹೂವಿನ ಹಾರ ಬೇಡ ಎಂದು ನಿರಾಕರಿಸಿದರು.
‘ಸುಗಂಧರಾಜ ಹೂವಿನ ಹಾರ ಬಿಟ್ಟು ಬೇಕಾದರೇ ಕಲ್ಲಿನ ಮಾಲೆ ಹಾಕಿ. ನನ್ನದೇನು ಅಭ್ಯಂತರವಿಲ್ಲ’ ಎಂದು ಸಚಿವರು ಹೇಳಿದ್ದಕ್ಕೆ ಸುತ್ತಮುತ್ತಲಿದ್ದವರು ನಸುನಕ್ಕರು. ಸುಗಂಧರಾಜ ಹೂವಿನ ಹಾರ ಬೇಡ ಎಂದಿದ್ದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಪ್ರಶ್ನಿಸಿದರೂ; ಡಿಕೆಶಿ ಉತ್ತರ ನೀಡದೆ ನಕ್ಕು ಸುಮ್ಮನಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.