ತಾಂಬಾ: ಸಮೀಪದ ಬೆನಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ತೊಗರಿ ಖರೀದಿ ಕೇಂದ್ರಕ್ಕೆ ಗುರುವಾರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಶೇಖರ ಹೊಸಮನಿ ಚಾಲನೆ ನೀಡಿದರು.
‘ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಒಂದು ಎಕೆರಗೆ 4 ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿದೆ. ಅಂದಾಜು 138 ರೈತರು ಹೆಸರು ನೋಂದಾಯಿಸಿದ್ದಾರೆ. ಈ ತೊಗರಿ ಕೇಂದ್ರದಿಂದ ಬೆನಕನಹಳ್ಳಿ, ಶಿರಕನಹಳ್ಳಿ, ಕೆಂಗನಾಳ, ಶಿವಾಪುರ ಬಿ.ಕೆ. ಗ್ರಾಮದ ರೈತರು ಪ್ರಯೋಜನ ಪಡೆಯಬೇಕು’ ಎಂದು ಅವರು ಹೇಳಿದರು.
ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಉಮೇಶ ಹೊಸಮನಿ ಮಾತನಾಡಿ, ‘ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟನಲ್ಲಿ ತೊಗರಿಗೆ ಬೆಂಬಲ ಬೆಲೆ ಘೋಷಿಸಿದೆ ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ರೈತರು ತೊಗರಿ ಮಾರಟಕ್ಕೆ ಹೆಸರು ನೊಂದಣಿ ಮಾಡಿದವರು ಕೇಂದ್ರಕ್ಕೆ ನೀಡಬೇಕು ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ’ ಎಂದರು.
ಗ್ರಾಮದ ಹಿರಿಯರಾದ ಶ್ರೀಮಂತ ಲೋಣಿ, ಅಪ್ಪು ಹೊಸಮನಿ, ಉಪಾಧ್ಯಕ್ಷರಾಗಿ ಚನಬಸಪ್ಪ ರೇವಣಸಿದ್ದಪ್ಪ ಮಸಳಿ, ಸದಸ್ಯರಾದ ಬಾಬಾಗೌಡ ರುದ್ರಗೌಡ ಪಾಟೀಲ, ಭೀರಪ್ಪ ಪೂಜಪ್ಪ ಪೂಜಾರಿ, ಶರಣಪ್ಪ ಮಲ್ಲಪ್ಪ ಹೊಸಮನಿ, ಸಿದರಾಯ ಘಂಟೆಪ್ಪ ಲೋಣಿ, ಅಂಬಿಕಾ ಸುನೀಲ ಬಿರಾದಾರ, ಮಹಾದೇವಿ ಜಟ್ಟೆಪ್ಪ ಗೌಡಗಾವಿ, ಶ್ರೀಮಂತ ನಾಗಪ್ಪ ಲೋಣಿ, ದಯಾನಂದ ಹಿರೋಳಿ, ನಿಂಗಪ್ಪ ಯಮನಪ್ಪ ಸಮಗಾರ, ಬಾಲಪ್ಪ ಪೂಜಪ್ಪ ನಾಯಿಕೊಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.