ADVERTISEMENT

ವಿಜಯಪುರ: ಮುಳವಾಡ, ಮಲಘಾಣದಲ್ಲಿ ಮತ್ತೆ ಭೂಕಂಪನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 8:24 IST
Last Updated 10 ಅಕ್ಟೋಬರ್ 2021, 8:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಕೊಲ್ಹಾರ ತಾಲ್ಲೂಕಿನ ಮುಳವಾಡ, ಮಲಘಾಣ ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ 5:15 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ.

ಭೂಮಿಯೊಳಗೆ ಸ್ಪೋಟದ ಶಬ್ದ ಕೇಳಿ ಬಂದಿದೆ. ಭಯಭೀತರಾದ ಗ್ರಾಮಸ್ಥರು ಮನೆಗಳಿಂದ ಹೋರ ಓಡಿ ಬಂದಿದ್ದಾರೆ.

ಅ.5 ರಂದು ಮಸೂತಿ ಗ್ರಾಮದಲ್ಲಿ 2.9 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಎರಡು ತಿಂಗಳ ಈಚೆಗೆ ವಿಜಯಪುರ ನಗರ, ಸಿಂದಗಿ, ಕೋಲ್ಹಾರ, ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕಂಪನ ಆಗಾಗ ಸಂಭವಿಸುತ್ತಲೇ ಇದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.