ಮುದ್ದೇಬಿಹಾಳ: ‘ಕುಲಕಸುಬು ನಂಬಿ ಬದುಕು ಸಾಗಿಸುತ್ತಿರುವ ಬೋವಿ ಜನಾಂಗದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೇರಣೆಯಾಗಬೇಕು’ ಎಂದು ಅಖಿಲ ಕರ್ನಾಟಕ ಬೋವಿ ವಡ್ಡರ್ ಯುವ ವೇದಿಕೆ ತಾಲ್ಲೂಕು ಘಟಕದ ಉಪಾಧ್ಯಕ್ಷ ಹಣಮಂತ ಯ. ಭೈರವಾಡಗಿ ಹೇಳಿದರು.
ತಾಲೂಕಿನ ಢವಳಗಿ ಗ್ರಾಮದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಬೋವಿ ಜನಾಂಗದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಗೌರವಕ್ಕೆ ನಮ್ಮ ಮಕ್ಕಳು ಪಾತ್ರರಾಗುತ್ತಾರೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಜ್ಯೋತಿ ರಾ. ಪಾತ್ರೋಟ, ರಾಧಿಕಾ ಬ. ಗೌಂಡಿ, ಪವಿತ್ರಾ ಪಾತ್ರೋಟ, ರಾಜು ವಡ್ಡರ, ಸಾಗರ ಹಡಲಗೇರಿ, ಶ್ರೀರಾಮ್ ವಡ್ಡರ, ಅರುಣ್ ವಡ್ಡರ, ಗಂಗಾಧರ ವಡ್ಡರ, ಸಂಜನಾ ಢವಳಗಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಅಧ್ಯಕ್ಷ ರವಿ ಢವಳಗಿ, ಶಿಕ್ಷಕ ನಾಗಪ್ಪ ಢವಳಗಿ, ಪತ್ರಕರ್ತ ಹಣಮಂತ ಬಿ ಬೆಳಗಲ್, ಶಿಕ್ಷಕಿಯರಾದ ಅಮರಾವತಿ ನಾ ಢವಳಗಿ, ಮಾಹಾದೇವಿ ಭೈರವಾಡಗಿ, ಸಾಬಣ್ಣ ಭೈರವಾಡಗಿ, ಪ್ರಕಾಶ ಭೈರವಾಡಗಿ, ಹೆಸ್ಕಾಂ ಅಧಿಕಾರಿ ಜಗದೀಶ ದೊಡ್ಡಮನಿ, ರಾಜು ಭೈರವಾಡಗಿ, ಸೋಮಪ್ಪ ಢವಳಗಿ, ರಾಜು ಪಾತ್ರೋಟ, ಮಂಜುನಾಥ್ ಢವಳಗಿ, ಕಾಶಪ್ಪ ಭೈರವಾಡಗಿ, ಬಸವರಾಜ ಪಾತ್ರೋಟ, ಮಾಂತೇಶ ಢವಳಗಿ, ಸಾಗರ ಢವಳಗಿ, ಗಿರೀಶ್ ಬೈರವಾಡಗಿ, ಸಿದ್ರಾಮ ಢವಳಗಿ, ಶ್ರೀಕಾಂತ ಭೈರವಾಡಗಿ, ಪ್ರವೀಣ್ ಢವಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.