ADVERTISEMENT

ವಿಜಯಪುರ: ಗಮನ ಸೆಳೆದ ಈದ್ ಮಿಲಾದ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 14:30 IST
Last Updated 4 ಸೆಪ್ಟೆಂಬರ್ 2025, 14:30 IST
   

ವಿಜಯಪುರ: ಈದ್ ಮಿಲಾದ್ ಹಬ್ಬದ ಮುನ್ನಾ ದಿನವಾದ ಗುರುವಾರ ಅಂಜುಮನ್‌ ಇಸ್ಲಾಂ ಬಿಜಾಪುರ ಮತ್ತು ಮೈನಾರಿಟಿ ಮುಸ್ಲಿಂ ಡೆವಲಪ್‌ಮೆಂಟ್‌ ಕಮಿಟಿ ಸಹಯೋಗದಲ್ಲಿ ಬೃಹತ್‌ ರ‍್ಯಾಲಿ ನಡೆಯಿತು.

ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಯು ನಗರದ ಹಕೀಂ ಚೌಕದಿಂದ ಆರಂಭಗೊಂಡು ಜುಮ್ಮಾ ಮಸೀದಿ, ಬಡಿಕಮಾನ್, ಅತಾವುಲ್ಲಾ ಸರ್ಕಲ್, ಬಾಗಲಕೋಟೆ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕನಕದಾಸ ಸರ್ಕಲ್ ಮೂಲಕ ಸಾಗಿ ಆಸರ್ ಮಹಲ್‌ಗೆ ತೆರಳಿತು.

ನಾಥ್ ಹಾಗೂ ದರೂದ್ ಪಠಣದೊಂದಿಗೆ ಮೆರವಣಿಗೆ ನಡೆಯಿತು. ಶ್ವೇತ ವಸ್ತ್ರಧಾರಿಗಳಾದ ಯುವ ಜನರು ಧರ್ಮದ ಧ್ವಜಗಳನ್ನು ಹಿಡಿದು ಮಹಮ್ಮದ್‌ ಪೈಗಂಬರ್‌ ಪರ ಘೋಷಣೆಗಳನ್ನು ಹಾಕುತ್ತಾ ಸಾಗಿದರು. ಮೆರವಣಿಗೆ ಬಳಿಕ ಆಸರ್‌ ಮಹಲ್‌ನಲ್ಲಿ ಇರುವ ಪೈಗಂಬರ್‌ ಅವರ ಕೇಶ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. 

ADVERTISEMENT

ಮುಖಂಡರಾದ ಎಲ್.ಎಲ್. ಉಸ್ತಾದ್, ಬಿ.ಎಚ್. ಮಹಾಬರಿ, ಹಮೀದ್‌ ಮುಶ್ರೀಫ್‌, ಅಬ್ದುಲ್‌ ರಜಾಕ್‌ ಹೊರ್ತಿ, ಜಮೀರ್ ಅಹಮ್ಮದ್ ಬಾಂಗಿ, ಇರ್ಫಾನ್‌ ಶೇಖ್‌, ಜಮೀರ್ ಅಹಮ್ಮದ್ ಭಕ್ಷಿ, ರಫೀಕ್ ಅಹಮ್ಮದ್ ಸೌದಾಗರ, ಅಲ್ತಾಪ್ ಖಾದ್ರಿ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.