ದೇವರಹಿಪ್ಪರಗಿ: ಪಟ್ಟಣದ ಇಂಡಿ ರಸ್ತೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣಗೊಂಡಿದೆ. ಆದರೆ ರಸ್ತೆಯ ಮಧ್ಯದಲ್ಲಿರುವ ಹೆಸ್ಕಾಂ ಕಚೇರಿ ಮುಂದಿರುವ ಎರಡು ಕಂಬಗಳು ಹಾಗೂ ಹನುಮಾನ ದೇವಸ್ಥಾನದ ಮುಂದಿರುವ ವಿದ್ಯುತ್ ಕಂಬ ಸ್ಥಳಾಂತರಗೊಳಿಸದ ಕಾರಣ ಪ್ರಯಾಣಿಕರ ನಿತ್ಯಸಂಚಾರಕ್ಕೆ ಅಡಚಣೆಯಾಗುತ್ತಿದೆ.
ರಸ್ತೆ ನಿರ್ಮಾಣ ಆರಂಭಗೊಳ್ಳುವ ಮುನ್ನ ಪಟ್ಟಣ ಪಂಚಾಯಿತಿಯ ಅಂದಿನ ಮುಖ್ಯಾಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವ 33 ಕೆ.ವಿಯ 2 ವಿದ್ಯುತ್ ಕಂಬಗಳ ಶುಲ್ಕ ಭರಿಸಿ ಕಂಬಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರಾದರೂ ಕಾರಣಾಂತರಗಳಿಂದ ಆ ಕಂಬ ಸ್ಥಳಾಂತರವಾಗಿಯೇ ಇಲ್ಲ.
ಇಂಡಿ ರಸ್ತೆಯ 1ಕಿ.ಮೀ ಈಗ ದ್ವಿಪಥ ರಸ್ತೆಯಾಗಿ ಪೂರ್ಣಗೊಂಡು ಸಾರ್ವಜನಿಕರು ಪಯಣಿಸುವಂತಾಗಿದೆ. ಆದರೆ ಅಪಘಾತಕ್ಕೆ ಆಹ್ವಾನ ನೀಡುವ ರಸ್ತೆಯ ಮಧ್ಯದ ಕಂಬಗಳು ಹಾಗೆಯೇ ಉಳಿದಿದ್ದು, ಕೂಡಲೇ ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಪಟ್ಟಣ ಪಂಚಾಯಿತಿಯವರು ಕ್ರಮ ವಹಿಸಿ, ಸ್ಥಳಾಂತರಿಸಬೇಕು.
ಬಸಯ್ಯ ಮಲ್ಲಿಕಾರ್ಜುನಮಠ, ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.