ADVERTISEMENT

ಐದು ಸಾವಿರ ಯುವ ಜನರಿಗೆ ಉದ್ಯೋಗ: ಅಣ್ಣಿಗೇರಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 10:54 IST
Last Updated 10 ನವೆಂಬರ್ 2022, 10:54 IST
ಇಂಡಿಯಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ಹಾಗೂ ಸಿಬ್ಬಂದಿ ತರಬೇತಿ ಶಿಬಿರದಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿದರು
ಇಂಡಿಯಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ಹಾಗೂ ಸಿಬ್ಬಂದಿ ತರಬೇತಿ ಶಿಬಿರದಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿದರು   

ವಿಜಯಪುರ:ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಐದು ಸಾವಿರ ಯುವಕ ಯುವತಿಯರಿಗೆ ಉದ್ಯೋಗ ನೀಡಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾದರಿಯಾಗಿದ್ದಾರೆ ಎಂದುಸಿದ್ಧಸಿರಿ ಸೌಹಾರ್ದ ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಹೇಳಿದರು.

ಇಂಡಿಯಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ಹಾಗೂ ಸಿಬ್ಬಂದಿ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇವಲ 16 ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯು ರಾಜ್ಯದಾದ್ಯಂತ 150 ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ADVERTISEMENT

ಕಳೆದ 2 ವರ್ಷಗಳಿಂದ ಕೊರೊನಾ ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಯುವಕ, ಯುವತಿಯರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಅನೇಕರು ಅರ್ಧವೇತನ ತೆಗೆದುಕೊಂಡು ಕಾರ್ಯ ಮಾಡಿದರು. ಆದರೆ, ಯತ್ನಾಳರ ದೂರದೃಷ್ಟಿ ಹಾಗೂ ಕ್ರಾಂತಿಕಾರಿ ನಿರ್ಣಯಗಳಿಂದ ಸಿದ್ಧಸಿರಿ ಸೌಹಾರ್ದ ಸಹಕಾರಿ, ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆ, ಸಂಗನಬಸವ ಅಂತರರಾಷ್ಟ್ರೀಯ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ಶಿಶುನಿಕೇತನ, ಗೋ ಶಾಲೆ, ಶ್ರೀಸಿದ್ದೇಶ್ವರ ಸೂಪರ್ ಬಜಾರ್, ಎಸ್ ಹೈಪರ್ ಮಾರ್ಟ್, ಚಿಂಚೋಳಿಯ ಸಿದ್ಧಸಿರಿ ಶುಗರ್ಸ್ ಮತ್ತು ಇಥೆನಾಲ್ ಪವರ್ ಘಟಕ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನೊಂದಿಗೆ ಪ್ರಾರಂಭವಾಗಿರುವ ಜೆ.ಎಸ್.ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಒಟ್ಟು 5 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಸಿದ್ಧಸಿರಿಯು ಷೇರುದಾರರಿಗೆ ಶೇ 25 ರಷ್ಟು ಲಾಭಾಂಶ ನೀಡಿದ್ದು, ವಯೋವೃದ್ಧರಿಗೆ, ವಿಧವೆಯರಿಗೆ, ಸೈನಿಕರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ವಿಶೇಷ ಸವಲತ್ತುಗಳನ್ನು ನೀಡುವುದರೊಂದಿಗೆ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಸಿದ್ಧಸಿರಿ ಸೌಹಾರ್ದ ಸಹಕಾರಿಯು ರಾಜ್ಯದಲ್ಲಿ ಪ್ರಥಮ 5 ಸೌಹಾರ್ದಗಳಲ್ಲಿ ಗುರುತಿಸಲ್ಪಡುವಂತಾಗಿದೆ ಎಂದು ರಾಘವ ಅಣ್ಣಿಗೇರಿ ತಿಳಿಸಿದರು.

ಸಿದ್ಧಸಿರಿ ಸೌಹಾರ್ದ ಸಹಕಾರಿಯ ನಿರ್ದೇಶಕ ಜಗದೀಶ ಕ್ಷತ್ರಿ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯು ಇಂಡಿ ತಾಲ್ಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿದ್ದು, ತನ್ನ ಸೇವೆಯ ಮುಖಾಂತರ ಗ್ರಾಹಕರ ಮನಸ್ಸನ್ನು ಗೆದ್ದಿದೆ ಎಂದರು.

ವಕೀಲ ಸತೀಶಚಂದ್ರ ಕುಲಕರ್ಣಿ, ಶ್ರೀಮಂತ ಕೊಡತೆ, ಅನಿತಾ ಪಾದಗಟ್ಟಿ, ಪ್ರಧಾನ ವ್ಯವಸ್ಥಾಪಕಿ ಉಮಾದೇವಿ ಹಿರೇಮಠ, ವಲಯ ಅಧಿಕಾರಿಗಳಾದ ಚಂದ್ರಕಾಂತ ಗಿಣ್ಣಿ, ಗುರನಗೌಡ ಬಿರಾದಾರ, ರವಿಗೌಡ ಪಾಟೀಲ, ಮಲ್ಲಿಕಾರ್ಜುನ ಉಪಾಸೆ, ಅಧಿಕಾರಿಗಳಾದ ಯೋಗೀಶ ಹಳ್ಳಿ, ಸುಶೀಲ ಪವಾರ, ಶಾಂತೇಶ ಕ್ಷತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.