ADVERTISEMENT

ವಿಜಯಪುರ: ದ್ರಾಕ್ಷಿ ಕೃಷಿಯಿಂದ ರೈತರು ವಿಮುಖ

ಬಸವರಾಜ ಸಂಪಳ್ಳಿ
Published 3 ಮೇ 2025, 22:30 IST
Last Updated 3 ಮೇ 2025, 22:30 IST
   

ವಿಜಯಪುರ: ಜಿಲ್ಲೆಯಲ್ಲಿ ಈ ವರ್ಷ 1.84 ಲಕ್ಷ ಟನ್‌ ಒಣದ್ರಾಕ್ಷಿ ಉತ್ಪಾದನೆಯಾಗಿದೆ.

‘ಈ ವರ್ಷ ಇಳುವರಿ ಕಡಿಮೆ ಇರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿದೆ. ಒಣದ್ರಾಕ್ಷಿಯನ್ನು ಕೆ.ಜಿಗೆ ₹180ರಿಂದ ₹300ರ ವರೆಗೆ ರೈತರು ಮಾರಾಟ ಮಾಡಿದ್ದಾರೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್‌ ಭಾವಿದೊಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಕ್ರೇನ್‌–ರಷ್ಯಾ, ಇಸ್ರೇಲ್‌–ಪ್ಯಾಲೆಸ್ಟೀನ್ ಯುದ್ಧ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ತಲೆದೋರಿದ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಒಣದ್ರಾಕ್ಷಿಗೆ ದರ ಕುಸಿದಿತ್ತು’ ಎಂದರು.

ADVERTISEMENT

‘ಕಳೆದ ಒಂದು ದಶಕದಿಂದ ಈಚೆಗೆ ದ್ರಾಕ್ಷಿಗೆ ಉತ್ತಮ ದರ ಸಿಗದ ಕಾರಣ ಶೇ 20ರಷ್ಟು ರೈತರು ದ್ರಾಕ್ಷಿ ಗಿಡಗಳನ್ನು ತೆರವುಗೊಳಿಸಿದ್ದಾರೆ. 2023–24ನೇ ಸಾಲಿನಲ್ಲಿ ತೀವ್ರ ಪ್ರಮಾಣದ ಬರದಿಂದಾಗಿ ನೀರಿಲ್ಲದೇ ದ್ರಾಕ್ಷಿ ಗಿಡಗಳು ಬಾಡಿವೆ. ಒಣದ್ರಾಕ್ಷಿ ಉತ್ಪಾದನೆ ಕಡಿಮೆ ಆದ ಕಾರಣ ಮಾರುಕಟ್ಟೆಯಲ್ಲಿ ಈ ವರ್ಷ ಗರಿಷ್ಠ ದರ ಸಿಕ್ಕಿದೆ’ ಎಂದು ವಿಜಯಪುರ ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.