ADVERTISEMENT

‘ಜಾನಪದ ನಮ್ಮ ಸಂಸ್ಕೃತಿಯ ಪ್ರತಿಬಿಂಬ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:15 IST
Last Updated 12 ಸೆಪ್ಟೆಂಬರ್ 2024, 16:15 IST
ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ  ಬಿ.ಎಸ್.ಬಿರಾದಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಬ ಸಾಲವಾಡಗಿ ವಲಯ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಪದಗ್ರಹಣ ಮಾಡಿದರು
ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ  ಬಿ.ಎಸ್.ಬಿರಾದಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಬ ಸಾಲವಾಡಗಿ ವಲಯ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಪದಗ್ರಹಣ ಮಾಡಿದರು   

ತಾಳಿಕೋಟೆ: ‘ಜಾನಪದವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅವಶ್ಯವಿದೆ’ ಎಂದು ಪೀರಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ದಮ್ಮೂರಮಠ ಹೇಳಿದರು.

ಪೀರಾಪುರ ಗ್ರಾಮದ ಬಿ.ಎಸ್.ಬಿರಾದಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲ್ಲೂಕು ಘಟಕ ತಾಳಿಕೋಟೆ ವತಿಯಿಂದ ಹಮ್ಮಿಕೊಂಡಿದ್ದ ಬ ಸಾಲವಾಡಗಿ ವಲಯ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ನಾವದಗಿ ಬೃಹನ್ಮಠದ ರಾಜೇಂದ್ರ ಒಡೆಯರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವರ ಹಿಪ್ಪರಗಿ ಮತಕ್ಷೇತ್ರದ ಕೆಪಿಸಿಸಿ ಸದಸ್ಯ ಸುರೇಶ್ ಬಾಬುಗೌಡ ಬಿರಾದಾರ ಉದ್ಘಾಟಿಸಿದರು.

ADVERTISEMENT

ವಿಜಯಪುರ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಪ್ರಭುಗೌಡ ಬಿ.ಎಲ್. ಚಬನೂರ, ಅಧ್ಯಕ್ಷತೆ ವಹಿಸಿದ್ದ ಕಜಾಪ ತಾಳಿಕೋಟೆ ತಾಲ್ಲೂಕ ಘಟಕದ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಮಾತನಾಡಿದರು.

ಕಜಾಪ ಜಿಲ್ಲಾ ಸಂಚಾಲಕ ಎಂ ಜಿ ಹಳ್ಳೂರ, ಮುದ್ದೇಬಿಹಾಳ ಘಟಕದ ಅಧ್ಯಕ್ಷ ಎ ಆರ್ ಮುಲ್ಲಾ, ತಾಳಿಕೋಟೆ ತಾಲ್ಲೂಕು ಘಟಕದ ಖಜಾಂಚಿ ಎನ್.ಎಸ್. ಮಂಟಗಿ, ಸದಸ್ಯ ಸೋಮಶೇಖರಯ್ಯ ಹಿರೇಮಠ, ಎನ್‌.ಬಿ ನಾಡಗೌಡ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಲಯ ಘಟಕದ ಪದಾಧಿಕಾರಿಗಳು: ಸುರೇಶಬಾಬುಗೌಡ ಬಿರಾದಾರ (ಗೌರವಾಧ್ಯಕ್ಷ), ಭೀಮನಗೌಡ ಇಂಗಳಗೇರಿ (ಅಧ್ಯಕ್ಷ), ಶರಣಬಸವಗೌಡ ಬಿರಾದಾರ (ಕಾರ್ಯದರ್ಶಿ), ಮಹಾದೇವಪ್ಪ ಬಿಳೆಬಾವಿ (ಸಂಚಾಲಕ), ಬಡೇಸಾಬ್ ಮೂಕಿಹಾಳ, ಬಸನಗೌಡ ಬಿರಾದಾರ, ದಾವಲಸಾಬ ಅಗ್ನಿ (ಸದಸ್ಯರು), ಸಲಹಾ ಸಮಿತಿಯ ಬಸಲಿಂಗಮ್ಮ ಬಿರಾದಾರ, ಶಾಂತಪ್ಪ ಮಾದರ, ಸಂಗಣ್ಣ ನಾಯ್ಕೋಡಿ, ಸಿದ್ದಪ್ಪ ಹರಿಜನ, ಅಂಬರೀಶ ತಳಗೇರಿ, ಹನುಮಂತ್ರಾಯ ವಾಲಿಕಾರ ಅವರುಗಳು ಪದಗ್ರಹಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.