ADVERTISEMENT

ವೀರಭದ್ರಪ್ಪ ದಳವಾಯಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:57 IST
Last Updated 18 ಆಗಸ್ಟ್ 2022, 15:57 IST
ವೀರಭದ್ರಪ್ಪ ದಳವಾಯಿ
ವೀರಭದ್ರಪ್ಪ ದಳವಾಯಿ   

ವಿಜಯಪುರ: ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ ಏಕತಾರಿ ಪದಗಳನ್ನು ಹಾಡುವ ಹಿರಿಯ ಕಲಾವಿದ ವೀರಭದ್ರಪ್ಪ ದಳವಾಯಿ(72) ಅವರಿಗೆ 2022ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನೇಪಾಳ, ಮಣಿಪುರ, ನವದೆಹಲಿ, ಬೆಂಗಳೂರು, ಮೈಸೂರು, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಗಳಲ್ಲಿ ಕಾರ್ಯಕ್ರಮ ನೀಡಿರುವ ವೀರಭದ್ರಪ್ಪ ದಳವಾಯಿ ಇಂದಿಗೂ ಏಕತಾರಿ ಪದಗಳಿಂದ ಮನೆ ಮಾತಾಗಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವೀರಭದ್ರಪ್ಪ ದಳವಾಯಿ, ‘ಪ್ರಶಸ್ತಿ ಬಂದಿರುವುದಕ್ಕೆ ನನಗೆ ತುಂಬಾ ಖುಷಿ, ಸಂತೋಷವಾಗಿದೆ’ ಎಂದು ಹೇಳಿದರು.

ADVERTISEMENT

ಏಕತಾರಿ ಪದಗಳು ಇಂದಿನ ಮತ್ತು ಮುಂಡಿನ ಪೀಳಿಗೆಗೆ ಉಳಿಸಿ, ಬೆಳಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ ಎಂದು ಸಲಹೆ ನೀಡಿದರು.

ನಾನು ಕೇವಲ ಮೂರನೇ ತರಗತಿ ವರೆಗೆ ಓದಿರುವೆ. ಮುದ್ದಾಪುರದ ನನ್ನ ಸ್ವಂತ ಜಾಗದಲ್ಲಿ ವಾಲ್ಮೀಕಿ ಕಲಾ ಸಂಘ ಸ್ಥಾಪಿಸಿ ಯುವಕರಿಗೆ ಏಕತಾರಿ ಪದಗಳ ಬಗ್ಗೆ ತರಬೇತಿ ನೀಡುತ್ತಿದ್ದೇನೆ ಎಂದು ಹೇಳಿದರು.

ಹೊಲದಲ್ಲಿ ಒಕ್ಕಲುತನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸರ್ಕಾರದಿಂದ ಮಾಶಾಸನ ಸಿಗುತ್ತಿದೆ ಎಂದು ತಿಳಿಸಿದರು.

₹25 ಸಾವಿರ ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.