ADVERTISEMENT

ಇಂಡಿ: ಅರಣ್ಯ ಇಲಾಖೆಯಿಂದ 47 ಸಾವಿರ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:30 IST
Last Updated 29 ಮೇ 2024, 14:30 IST
ಇಂಡಿ ತಾಲ್ಲೂಕಿನ ಬಬಲಾದ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ವಿತರಿಸಲು ಸಸಿಗಳನ್ನು ಜೋಡಿಸಿಡಲಾಗಿದೆ
ಇಂಡಿ ತಾಲ್ಲೂಕಿನ ಬಬಲಾದ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ವಿತರಿಸಲು ಸಸಿಗಳನ್ನು ಜೋಡಿಸಿಡಲಾಗಿದೆ   

ಇಂಡಿ: ಇಂಡಿ ತಾಲ್ಲೂಕಿನ ಬಬಲಾದ ಸಸ್ಯಕ್ಷೇತ್ರದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 47 ಸಾವಿರ ಸಸಿಗಳನ್ನು ವಿತರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.

ಪಟ್ಟಣದ ಸಾಮಾಜಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಜೂನ್ 3ರಿಂದ ರೈತರಿಗೆ, ಸಂಘಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಸಸಿಗಳನ್ನು ವಿತರಿಸಲಾಗುವುದು. ಸಸಿಗಳು 6X9(₹3) ಮತ್ತು 8X12(₹6) ಬ್ಯಾಗ್ ಸೈಜ್‌ನಲ್ಲಿವೆ ಎಂದರು.

ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು 6X9 ಬ್ಯಾಗ್‌ ಸೈಜ್‌ನಲ್ಲಿ ಮತ್ತು ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು, ನಿಂಬೆ, ನುಗ್ಗೆ 8X12 ಬ್ಯಾಗ್‌ ಸೈಜ್‌ನಲ್ಲಿ ದೊರೆಯುತ್ತವೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಹೊರ್ತಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಲ್.ಜಿ.ನಾದ, ಗಸ್ತು ವನ ಪಾಲಕ ಡಿ.ಎ.ಮುಜಗೊಂಡ, ಇಂಡಿ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹುನ್ನುರ, ನಾಗೇಶ ಬಿರಾದಾರ, ಕಲ್ಲಪ್ಪ ಹರಿಜನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.