ADVERTISEMENT

ಹೈಪೋ ಕ್ಲೋರೈಡ್ ಉಚಿತ ವಿತರಣೆ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:43 IST
Last Updated 21 ಮೇ 2021, 14:43 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ವಿಜಯಪುರ: ಕೊರೊನಾ ಸೋಂಕು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರುಡುತ್ತಿದ್ದು, ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯಿತಿಗೆ ಸೋಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತ ವಿತರಿಸಲಾಗುವುದು ಎಂದು ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಸೋಡಿಯಂ ಹೈಪೊಕ್ಲೋರೈಡ್ ಸೊಂಕು ನಿವಾರಕ ದ್ರಾವಣವಾಗಿದ್ದು, ಕೊರೊನಾ ಸೇರಿದಂತೆ ಯಾವುದೇ ರೀತಿಯ ವೈರಾಣುವಿನ ವಿರುದ್ಧ ಹೋರಾಡಲು ಇದನ್ನು ಬಳಸಬಹುದು ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಸಂತೆ ಕಟ್ಟೆಗಳ ಬಳಿ ಇದನ್ನು ಸ್ಯಾನಿಟೈಸ್ ಮಾಡಲು ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಈ ಸೌಲಭ್ಯವನ್ನು ಪಡೆದುಕೊಳ್ಳುವವರು ಮುಧೋಳದ ನಿರಾಣಿ ಶುಗರ್ಸ್ ಆವರಣದಲ್ಲಿರುವ ನಿರಾಣಿ ಫೌಂಡೇಶನ್ ಕಚೇರಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಫೌಂಡೇಶನ್ ಸಿಬ್ಬಂದಿ ಗಿರೀಶ ಆನಿಖಿಂಡಿ ಹಾಗೂ ಬಸವರಾಜ ಮಾಸಗತ್ತಿ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.