ADVERTISEMENT

ವಿಜಯಪುರ: ಕಬ್ಬಿಗೆ ಎಫ್‌ಆರ್‌ಪಿ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 15:24 IST
Last Updated 29 ಅಕ್ಟೋಬರ್ 2020, 15:24 IST
ಶ್ರೀಮಂತ ದುದಗಿ
ಶ್ರೀಮಂತ ದುದಗಿ   

ವಿಜಯಪುರ: ಜಿಲ್ಲೆಯಲ್ಲಿರುವ ಒಂಬತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಇನ್ನೆರಡು ದಿನಗಳಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವ ಹಂತದಲ್ಲಿದೆ. ಆದರೂ ಕಾರ್ಖಾನೆಗಳು ಕಬ್ಬಿಗೆ ಬೆಲೆ ನಿಗದಿಗೊಳಿಸಿಲ್ಲ ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ದುದಗಿ ಆರೋಪಿಸಿದ್ದಾರೆ.

ಎಫ್ಆರ್‌ಪಿ ನಿಗದಿ ಮಾಡದೇ ಕಬ್ಬು ನುರಿಸುವುದನ್ನು ಕಾರ್ಖಾನೆಗಳು ಆರಂಭಿಸಿದರೆರೈತರು ಯಾರು ಕಬ್ಬನ್ನು ಸಕ್ಕರೆ ಕಾರ್ಖಾನೆಗಳಗೆ ನೀಡಬಾರದು ಎಂದುಮನವಿ ಮಾಡಿದ್ದಾರೆ.

ಈಗಾಗಲೇ ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳು ಎಫ್ಆರ್‌ಪಿ ಪ್ರಕಾರ ಬೆಲೆ ನಿಗದಿಗೊಳಿಸಿವೆ. ಆದರೆ, ವಿಜಯಪುರ ಜಿಲ್ಲಾಧಿಕಾರಿಗಳು ತಕ್ಷಣ ಎಫ್‌ಆರ್‌ಪಿ ಪ್ರಕಾರ ಬೆಲೆ ನಿಗದಿಗೊಳಿಸಬೇಕು ಇಲ್ಲವೇ, ಆಯಾ ಸಕ್ಕರೆ ಕಾರ್ಖಾನೆ ರೈತರೊಂದಿಗೆ ಚರ್ಚಸಿ ಬೆಲೆ ನಿಗದಿಗೊಳಿಸಿ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಈಗಾಗಲೇ ಎರಡು ತಿಂಗಳ ಹಿಂದೆ ಎಫ್‌ಆರ್‌ಪಿ(ನ್ಯಾಯೋಚತ ಬೆಲೆ ನಿಗದಿ) ಪ್ರತಿ ಟನ್ ಕಬ್ಬಿಗೆ 9.5 ಸಕ್ಕರೆ ಇಳುವರಗೆ ₹ 2850 ಬೆಲೆ ನಿಗದಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಯಾವೊಂದು ಕಾರ್ಖಾನೆ ಬೆಲೆ ನಿಗದಿ ಮಾಡದಿರುವುದು ಖಂಡನೀಯ ಎಂದರು.

ಈಗಾಗಲೇ ಪ್ರವಾಹ ಹೊಡೆತಕ್ಕೆ ರೈತರು ದಿಕ್ಕೆಟ್ಟು ಹೋಗಿದ್ದಾರೆ. ರಾಜ್ಯ ಸರ್ಕಾರ ಮುಂದೆ ಬಂದು ರೈತರ ಹಿತವನ್ನು ಕಾಯಬೇಕು ಎಂದು ಅವರುಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.