ADVERTISEMENT

ಹಳ್ಳಿಗಳೇ ಭಾರತದ ಆತ್ಮ ಎಂದಿದ್ದ ಗಾಂಧಿ: ವಿನಯಾ ಹೂಗಾರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:18 IST
Last Updated 17 ಆಗಸ್ಟ್ 2025, 6:18 IST
ತಾಳಿಕೋಟೆ ತಾಲ್ಲೂಕಿನ ಬಿ.ಸಾಲವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ' ಗಾಂಧಿ ಸ್ಮೃತಿ ' ರಸಪ್ರಶ್ನೆ ಸಂವಾದ ಹಾಗೂ ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ತಹಶೀಲ್ದಾರ್‌ ಡಾ.ವಿನಯಾ ಹೂಗಾರ ಶನಿವಾರ ಉದ್ಘಾಟಿಸಿದರು
ತಾಳಿಕೋಟೆ ತಾಲ್ಲೂಕಿನ ಬಿ.ಸಾಲವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ' ಗಾಂಧಿ ಸ್ಮೃತಿ ' ರಸಪ್ರಶ್ನೆ ಸಂವಾದ ಹಾಗೂ ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ತಹಶೀಲ್ದಾರ್‌ ಡಾ.ವಿನಯಾ ಹೂಗಾರ ಶನಿವಾರ ಉದ್ಘಾಟಿಸಿದರು   

ತಾಳಿಕೋಟೆ: ’ಈ ಭೂಮಿ ಮನುಷ್ಯನ ಆಸೆಗಳನ್ನು ಪೂರೈಸಬಲ್ಲುದೇ ಹೊರತು ಆತನ ದುರಾಸೆಗಳನ್ನಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿರುವ ಮಾತನ್ನು ಯಾರು ಮರೆಯಬಾರದು. ಹಳ್ಳಿಗಳೇ ಭಾರತದ ಆತ್ಮ ಎಂದು ಬಾಪೂ ಹೇಳಿದ್ದಾರೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ, ಹಳ್ಳಿಗಳ ಸ್ವಚ್ಛತೆಯ ಕಡೆಗೆ ಎಲ್ಲರೂ ಗಮನ ಹರಿಸಬೇಕು ಎಂದು ತಾಳಿಕೋಟೆಯ ತಹಶೀಲ್ದಾರ ವಿನಯಾ ಹೂಗಾರ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ಬೇನಾಳ ಆರ್.ಎಸ್‌. ವಿಜಯಪುರ ಅವರ ಸಂಯುಕ್ತ ಆಶ್ರಯದಲ್ಲಿ ತಾಳಿಕೋಟೆ ತಾಲ್ಲೂಕಿನ ಬಿ. ಸಾಲವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ' ಗಾಂಧಿ ಸ್ಮೃತಿ ' ರಸಪ್ರಶ್ನೆ ಸಂವಾದ ಹಾಗೂ ಒಂದು ದಿನದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ತಾಳಿಕೋಟೆ ಪಿಎಸ್ಐ ಜ್ಯೋತಿ ಖೋತ್ ಮಾತನಾಡಿ, ಮಹಾತ್ಮ ಗಾಂಧಿ ನೈತಿಕತೆಯ ಪ್ರತಿರೂಪ. ಅವರ ಬದುಕಿನಲ್ಲಿ ಮಾನವೀಯತೆ ಸರ್ವೋದಯ ತತ್ವಕ್ಕೆ ಆದ್ಯತೆ ನೀಡಿದ್ದರು. ಬಾಪೂಜಿಯ ಸಾತ್ವಿಕ ಬದುಕು ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು.

ADVERTISEMENT

ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಸಾಹೇಬಗೌಡ ಮೂಲಿಮನಿ, ಆರ್‌ಎಂಜಿಎಫ್. ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಸತ್ಯದ ದಾರಿಯಲ್ಲಿ ಸಾಗಿ ಅಹಿಂಸೆ ಎಂಬ ಅಸ್ತ್ರವನ್ನು ಹಿಡಿದು ಭಾರತವನ್ನು ಬ್ರಿಟಿಷ್ ದಾಸ್ಯದಿಂದ ಬಿಡುಗಡೆಗೊಳಿಸಿದ ಮಹಾನ್ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಎಂದು ನುಡಿದರು.

ಮುಖ್ಯೋಪಾಧ್ಯಾಯಿನಿ ಸುಮಂಗಲಾ ಕೋಳೂರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾಹೇಬಗೌಡ ಅನಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಬಸಯ್ಯ ಹಿರೇಮಠ, ಶೇಖರಗೌಡ ರಾರೆಡ್ಡಿ, ಶರಣಗೌಡ ಯಾಳಗಿ, ಪ್ರಭುಗೌಡ ಅನಂತರೆಡ್ಡಿ, ಸಂಗನಗೌಡ ಲಿಂಗಾರೆಡ್ಡಿ, ಗಿರೀಶ ಅನಂತರೆಡ್ಡಿ, ಪ್ರವೀಣ ನಾಡಗೌಡರ, ಶ್ರೀಕಾಂತ ಕೊಡೇಕಲ್, ರತ್ನಾ ಹಂಗರಗಿ, ಇಬ್ರಾಹಿಂ ಮನಗೂಲಿ, ಶಾಂತಗೌಡ ಪಾಟೀಲ್, ಸಂಗನಗೌಡ ಗಬಸಾವ ಳಗಿ, ರಾಜೇಂದ್ರ ಹುನಗುಂದ, ಶಂಕರ ಕುಂಟೋಜಿ, ನೀಲಮ್ಮ ಕೊಡತೆ, ಭಾಗ್ಯವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಐ.ಎಂ.ಚಿಮ್ಮಲಗಿ ಸ್ವಾಗತಿಸಿದರು. ಸುವರ್ಣ ಮಠ ನಿರೂಪಿಸಿದರು. ಪೂಜಾ ಹಜೇರಿ ವಂದಿಸಿದರು.

ಗಾಂಧಿ ಛಾಯಾಚಿತ್ರಗಳ ಪ್ರದರ್ಶನ:  ಮಹಾತ್ಮನ ಬಾಲ್ಯ, ಜೀವನ, ಸತ್ಯಾಗ್ರಹ ಬದುಕು, ಸ್ವಾತಂತ್ರ್ಯ ಹೋರಾಟದ ಕುರಿತು ಬೆಳಕು ಚೆಲ್ಲುವ 50 ಛಾಯಾಚಿತ್ರ ಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ಹೊಸ ಭೂಮಿಕೆಯನ್ನು ಸೃಜಿಸಿತು.

ರಸಪ್ರಶ್ನೆ:  ಮಹಾತ್ಮ ಗಾಂಧಿ ಕುರಿತು ಜರುಗಿದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗಾಂಧಿ ಪುಸ್ತಕ, ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.