ADVERTISEMENT

ಜಿಲೆಟಿನ್‌ ಅಕ್ರಮ ಸಾಗಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 16:25 IST
Last Updated 4 ಮಾರ್ಚ್ 2021, 16:25 IST

ವಿಜಯಪುರ: ದೇವರಹಿಪ್ಪರಗಿ ತಾಲ್ಲೂಕಿನ ಬನ್ನೆಟ್ಟಿ(ಪಿ.ಎ) ಗ್ರಾಮದಲ್ಲಿಅಕ್ರಮವಾಗಿ ಸ್ಪೋಟಕವನ್ನು ವಾಹನಗಳಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬನ್ನೆಟ್ಟಿ(ಪಿ.ಎ) ಗ್ರಾಮದಸಂಗನಗೌಡ ಬಿರಾದಾರ(30) ಬಂಧಿತ ಆರೋಪಿ. ಜಿಲೆಟಿನ್‌ ಮತ್ತು ಡಿಟೋನೇಟರ್‌ಗಳನ್ನು ಐದು ವಾಹನಗಳಲ್ಲಿ ತುಂಬಿಕೊಂಡುಸಾಗಿಸಲು ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವಿ ಯಡವಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಲ್ಲು ಗಣಿಗಾರಿಕೆಯವರಿಗೆ ಮಾರಾಟ ಮಾಡಲು ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು ಎಂಬುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ADVERTISEMENT

ವಾಹನಗಳಲ್ಲಿ ಸುಮಾರು ₹3 ಲಕ್ಷ ಮೌಲ್ಯದ ಜಿಲೆಟಿನ್‌ ಬಾಕ್ಸ್‌ಗಳು, ಬೂಸ್ಟರ್‌ಗಳು ಮತ್ತು ಡಿಟೋನೇಟರ್‌ ವೈರ್‌ಗಳು ಇರುವುದು ಪತ್ತೆಯಾಗಿದೆ. ಈ ಸಂಬಂಧ ಪ್ರಕರಣದ ಮುಖ್ಯ ಆರೋಪಿ ಮಹಾಂತಗೌಡ ಬಿರಾದಾರ ಎಂಬುವವರ ವಿರುದ್ಧ ದೇವರ ಹಿಪ್ಪರಗಿ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.