ADVERTISEMENT

ಪ್ರಥಮ ಪ್ರಾಶಸ್ಯ್ತ ಮತ ನೀಡಿ: ಪೂಜಾರ ಮನವಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:03 IST
Last Updated 2 ಡಿಸೆಂಬರ್ 2021, 16:03 IST
ಇಂಡಿ ಪಟ್ಟಣದ ಮಂಗಳ ಕಾರ್ಯಾಲಯದಲ್ಲಿ ಗುರುವಾರ ನಡೆದ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ ಮತನಾಡಿದರು
ಇಂಡಿ ಪಟ್ಟಣದ ಮಂಗಳ ಕಾರ್ಯಾಲಯದಲ್ಲಿ ಗುರುವಾರ ನಡೆದ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ ಮತನಾಡಿದರು   

ಇಂಡಿ:ಗ್ರಾಮ ಪಂಚಾಯ್ತಿ ಹಾಗೂ ಪುರಸಭೆ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾಗಿ ಆಯ್ಕೆಯಾಗಿರುತ್ತೀರಿ. ನಿಮ್ಮ ಮೆಚ್ಚುಗೆಗೆ ಪಾತ್ರವಾಗುವ ಯೋಗ್ಯ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಬೇಕು ಎಂದ ಅವರು ಈ ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಶಸ್ಯ್ತ ಮತ ನೀಡಬೇಕು ಎಂದು ವಿಧಾನ ಪರಿಷತ್ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಮನವಿ ಮಾಡಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಗ್ರಾ.ಪಂ. ಮತ್ತು ಪುರಸಭೆ ಸದಸ್ಯರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿದ್ದು, ಒಂದೂ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮಾಡಿದ್ದು, ನನಗೆ ತೃಪ್ತಿ ಇದೆ. ಈ ಭಾಗದ ಜನರು ನನ್ನನ್ನು ಅತಿ ಕಾಳಜಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ನನ್ನ ಗೆಲುವು ಶತಸಿದ್ಧ ಎಂಬ ವಿಶ್ವಾಸ ನನಗಿದೆ

ADVERTISEMENT

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಭವಿಷ್ಯವಾಗಿದ್ದಾರೆ. ಅವರ ಆಡಳಿತದಲ್ಲಿ ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆಎಂದು ಹೇಳಿದರು.

ದೇಶದ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಜಲಜೀವನ ಮಷಿನ್‌ ಯೋಜನೆ ಮುಖಾಂತರ ಕೋಟ್ಯಂತರ ರೂಪಾಯಿ ಅನುದಾನ ನೀಡಿ, ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಗೆ ಮೋದಿ ಮುಂದಾಗಿದ್ದಾರೆ ಎಂದರು.

ಸಿಂದಗಿ ಶಾಸಕ ರಮೇಶ ಬೂಸನೂರ, ಮುದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಮಲ್ಲಿಕಾರ್ಜುನ ಕಿವುಡೆ , ಎಸ್.ಎ. ಪಾಟೀಲ, ಅನೀಲ ಜಮಾದಾರ, ಶಿವಯೋಗೆಪ್ಪ ನೇದಲಗಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಚಿದಾನಂದ ಛಲವಾದಿ, ವಿವೇಕ ಡಬ್ಬಿ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ವಿಜಯಲಕ್ಷ್ಮೀ ರೂಗಿಮಠ, ರಾಜಕುಮಾರ ಸಗಾಯಿ, ರವಿ ವಗ್ಗೆ, ಶಾಂತು ಕಂಬಾರ, ಸಂಜು ದಶವಂತ, ಯಲ್ಲಪ್ಪ ಹದರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.