ADVERTISEMENT

ವಿಜಯಪುರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 14:22 IST
Last Updated 8 ಜುಲೈ 2020, 14:22 IST
ವಿಜಯಪುರ ನಗರದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಮಹಿಳೆಯರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಮಹಿಳೆಯರು–ಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರ ನಗರ, ಕೊಲ್ಹಾರ, ನಾಲತವಾಡ,ಬಸವನ ಬಾಗೇವಾಡಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದಿಂದ ಸಂಜೆ ವರೆಗೆ ಉತ್ತಮ ಮಳೆಯಾಗಿದೆ.

ವಿಜಯಪುರ ನಗರದಲ್ಲಿ 8 ಮಿ.ಮೀ. ಮಳೆಯಾಗಿದೆ. ಬಸವನ ಬಾಗೇವಾಡಿ 9.3, ಮನಗೂಳಿ 4.2, ಆಲಮಟ್ಟಿ 4.4, ಹೂವಿನ ಹಿಪ್ಪರಗಿ 4.8, ಅರೇಶಂಕರ 7.2, ಮಟ್ಟಿಹಾಳ 6, ಭೂತನಾಳ 3.2, ಹಿಟ್ನಳ್ಳಿ 6.8, ತಿಕೋಟಾ 18.2, ಮಮದಾಪೂರ 2.5, ಕುಮಟಗಿ 2.8, ಬಬಲೇಶ್ವರ 6.8, ನಾದ ಬಿ.ಕೆ 6.2, ಮುದ್ದೇಬಿಹಾಳ 3, ನಾಲತವಾಡ 3.2, ಢವಳಗಿ 8, ಸಿಂದಗಿ 2.3, ಆಲಮೇಲ 3.2, ರಾಮನಹಳ್ಳಿ 2.8 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT