ADVERTISEMENT

ಸರ್ಕಾರಿ ಶಾಲೆ: ಹೈಟೆಕ್ ಕೊಠಡಿ ನಿರ್ಮಾಣ- ಎ.ಎಸ್.ಪಾಟೀಲ ನಡಹಳ್ಳಿ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:31 IST
Last Updated 6 ಮಾರ್ಚ್ 2023, 16:31 IST
ನಾಲತವಾಡ ಸಮೀಪದ ಕಿಲಾರಹಟ್ಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿದ ಶಾಸಕ  ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಗ್ರಾಮಸ್ಥರು ಸನ್ಮನಿಸಿದರು
ನಾಲತವಾಡ ಸಮೀಪದ ಕಿಲಾರಹಟ್ಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿದ ಶಾಸಕ  ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಗ್ರಾಮಸ್ಥರು ಸನ್ಮನಿಸಿದರು   

ನಾಲತವಾಡ: ಮತಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಆರಂಭಗೊಂಡ ಪ್ರತಿ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದು, ತಾಲ್ಲೂಕಿನ ಸುಮಾರು 80 ಸರ್ಕಾರಿ ಶಾಲೆಗಳ ಕೊಠಡಿಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿಗೆ ಸಮೀಪದ ಜೈನಾಪೂರದಲ್ಲಿ ₹ 66 ಲಕ್ಷದ ಸಿಸಿ ರಸ್ತೆ ಹಾಗೂ ಕಿಲಾರಹಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಡಿ ಸುಮಾರು ₹ 54 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಗ್ರಾಮದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಸದಾ ಬದ್ದನಿದ್ದು, ಈವರೆಗೆ ಮತಕ್ಷೇತ್ರಕ್ಕೆ ಸುಮಾರು ₹3800 ಕೋಟಿ ಅನುದಾನದಲ್ಲಿ ಮತಕ್ಷೇತ್ರದ ಚಿತ್ರಣ ಬದಲಿಸಿದ್ದೇನೆ ಎಂದರು.

ADVERTISEMENT

ತಾಲ್ಲೂಕಿನ ಪ್ರತಿ ಗ್ರಾಮದ ಮನೆಗೊಂದು ಮಹಿಳೆಯರಿಗೆ ಹಸು ಸಾಕಾಣಿಗೆ ಒತ್ತು ಕೊಡಲಾಗುತ್ತಿದ್ದು, ಹೈನುಗಾರಿಕೆಯ ಹೆಸರಲ್ಲಿ ಕ್ಷೀರಕ್ರಾಂತಿ ಮಾಡುತ್ತೇನೆ ಎಂದು ಹೇಳಿದರು.

ಗ್ರಾಮ ಮಟ್ಟದ ಪ್ರತಿ ಹಳ್ಳಿಗಳ ಪಕ್ಕದಲ್ಲಿ ಜಮೀನು ಖರೀದಿಸಿ ಬಡವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದು, ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜೆಜೆಎಂ ಯೋಜನೆಯಡಿ ₹ 854 ಕೋಟಿ ವೆಚ್ಚದಲ್ಲಿ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಈಗಾಗಲೇ ಪ್ರತಿ ಗ್ರಾಮದಲ್ಲಿ ಮನೆ ಮನೆಗಳಿಗೆ ನಳಗಳನ್ನು ಅಳವಡಿಸುತ್ತಿರುವ ಕಾರ್ಯ ನಡೆದಿದೆ ಎಂದರು.

ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಮೂಲಕ ರೈತರ ಹಿತವನ್ನು ಮುಂದಿಟ್ಟುಕೊಂಡು ₹ 1350 ಕೋಟಿ ವೆಚ್ಚದ ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇನ್ನಷ್ಟು ಅಭಿವೃದ್ದಿಗೆ ಮುಂದೆಯೂ ಸಹ ತಮ್ಮ ಸಹಕಾರ ಹಾಗೂ ಆಶೀರ್ವಾದ ಬೇಕಿದೆ ಎಂದರು.

25 ವರ್ಷಗಳಿಂದ ಮಸಾರೆ ಹಗಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದವು, ಪ್ರತಿ ಹಳ್ಳಿಗಳ ಅಭಿವೃದ್ದಿಗೆ 288 ಕೋಟಿ ಅನುದಾನ ನೀಡಿದ್ದೇನೆ, ₹ 49 ಕೋಟಿ ವೆಚ್ಚದಲ್ಲಿ ಪ್ರತಿ ರಸ್ತೆಯ ಕಟಿಂಗ್ ಕಾಮಗಾರಿ ಅಂತಿಮಗೊಳಿಸಿದ್ದೇವೆ ಎಂದರು.

ಬಸವರಾಜ ಗುರೂಜಿ ಮಾತನಾಡಿ, ಕಿಲಾರಟ್ಟಿ ಗ್ರಾಮದ ವಿದ್ಯಾರ್ಥಿಗಳು ದೂರದ ಪ್ರದೇಶದಲ್ಲಿರುವ ಪ್ರೌಢಶಾಲೆಗೆ ತೆರಳುವ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಿಲಾರಹಟ್ಟಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಆರಂಭಿಸಲು ಶಾಸಕರು ಮುಂದಾಗಬೇಕು, ಪ್ರೌಢಶಾಲೆ ನಿರ್ಮಾಣಕ್ಕೆ ಬೇಕಾಗುವ ಜಮೀನುಗಳನ್ನು ದಾನ ನೀಡುವರೂ ಇದ್ದಾರೆ ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣ ಸಿಗುವಂತಾಗಲಿ ಎಂದರು.

ಗ್ರಾಮದ ಬಿಜೆಪಿ ಧುರಿಣರಾದ ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ ಮಾತನಾಡಿದರು. ನಿವೃತ್ತ ಎಂಜಿನಿಯರ್ ಬಿ.ಬಿ.ಪಾಟೀಲ, ವಿದ್ಯಾರ್ಥಿನಿ ಪಾರ್ವತಿ ಕಟ್ಟಿಮನಿ, ಕಾಂತು ಮಣ್ಣೂರ, ಚನಬಸಪ್ಪ ಮೂಲಿಮನಿ, ಗ್ರಾ.ಪಂ ಸದಸ್ಯರಾದ ದೇವರಾಜ ನಾಯ್ಕೋಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವರಾಜ ಸರೂರ, ಸಿದ್ದಲಿಂಗಯ್ಯ ಹಿರೆಮಠ, ಆರ್.ಎನ್.ಪಾಟೀಲ, ಬಸವರಾಜ ಗುರು, ರುದ್ರಗೌಡ ಬಿರಾದಾರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗುಡುದಪ್ಪ ಕಮರಿ ಹಾಗೂ ಗ್ರಾ.ಪಂ ಸದಸ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.