ADVERTISEMENT

ನೀರಾವರಿ ಯೋಜನೆ ಜಾರಿಗೊಳಿಸದಿದ್ದರೆ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 16:42 IST
Last Updated 15 ಏಪ್ರಿಲ್ 2022, 16:42 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಆಲಮಟ್ಟಿ(ವಿಜಯಪುರ):ಜೆಡಿಎಸ್‌ಗೆ ಐದು ವರ್ಷ ಬಹುಮತದ ಸರ್ಕಾರ ರಚನೆಯಅಧಿಕಾರ ದೊರೆತರೆಕೃಷ್ಣಾ ಕೊಳ್ಳ ಸೇರಿ ರಾಜ್ಯದ ಎಲ್ಲ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇಲ್ಲದಿದ್ದರೆ ಪಕ್ಷವನ್ನೇ ವಿಸರ್ಜಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಆಲಮಟ್ಟಿಯಲ್ಲಿ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗುತ್ತಿಗೆದಾರಸಂತೋಷ್ ಪಾಟೀಲ ಆತ್ಮಹತ್ಯೆಯಲ್ಲಿ ಕಾಂಗ್ರೆಸ್ ಒಣ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ಗೆ ಮಾಡಲು ಬೇರೆ ಕೆಲಸವಿಲ್ಲ.ಅದಕ್ಕಾಗಿ ಇದೇ ವಿಷಯವನ್ನು ದೊಡ್ಡದಾಗಿ ಮಾಡುತ್ತಿದೆ ಎಂದರು.ಈಶ್ವರಪ್ಪ ಒಬ್ಬರೇ 40 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಸಂತೋಷ್ ಆರೋಪಿಸಿಲ್ಲ ಎಂದರು.

ADVERTISEMENT

ಈಶ್ವರಪ್ಪ ರಾಜೀನಾಮೆ ಕೊಟ್ಟರೂ ಕಾಂಗ್ರೆಸ್‌ನವರುಈಗ ಬಂಧನ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ.ಕಾಂಗ್ರೆಸ್‌ನವರು ಏನು ಮಾಡಿದ್ರು ಎನ್ನುವುದು ಗೊತ್ತಿದೆ. ಕಾಂಗ್ರೆಸ್‌ನವರು ಒಂದು ನಯಾ ಪೈಸೆ ಕಮಿಷನ್ ಪಡೆಯದೆ ಕೆಲಸ ಮಾಡಿದ್ರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ಇದುವರೆಗೆ ಮಲಗಿದ್ರು, ಈಗ ಸಂತೋಷ್ ಸಾವನ್ನ ಹಿಡಿದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಶಿವಮೊಗ್ಗದಲ್ಲಿ ಹರ್ಷ ಕೊಲೆ ಆದಾಗ ಎಲ್ಲಿ ಹೋಗಿದ್ರು ಎಂದು ಪ್ರಶ್ನಿಸಿದರು.ಸಂತೋಷ್ ಮಾಧ್ಯಮಕ್ಕೆ ಹೇಳಿಕೆ ನೀಡಿದಾಗ, ಈಶ್ವರಪ್ಪ ನನ್ನ ಬಳಿ ಡಿಮ್ಯಾಂಡ್ ಮಾಡಿಲ್ಲ ಅಂತ ಹೇಳಿದ್ರು.ಅವರ ಪಕ್ಕದಲ್ಲಿ ಇದ್ದವರು ಕಮಿಷನ್ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ.ಈಗ ಈಶ್ವರಪ್ಪ ಬಂಧನ ಆಗಬೇಕು ಅಂತ ಹೇಳಿದ್ದಾರೆ.ಕ್ರಿಮಿನಲ್ ಕೇಸ್ ಹಾಕಬೇಕು ಅಂತ ಹೇಳಿದ್ದಾರೆ.ಹಾಗೇನಾದ್ರೂ ಆದ್ರೆ, ಕಾಂಗ್ರೆಸ್‌ನ ಇಡೀ ದಂಡನ್ನೇ ಜೈಲಿಗೆ ಹಾಕಬೇಕು.ವರ್ಕ್‌ ಆರ್ಡರ್ ಇಲ್ಲದೆ, ಎಸ್ಟಿಮೇಟ್ ಇಲ್ಲದೆ ಹೇಗೆ ಕಾಮಗಾರಿ ಮಾಡಿದ್ರು. ಅಸೆಂಬ್ಲಿಯಲ್ಲಿ ನಡೆದ ವಾಗ್ವಾದ ವೈಯಕ್ತಿಕವಾಗಿ ತೆಗೆದುಕೊಂಡುಈಗ ಬಂಧನ ಮಾಡಿಸೋವರೆಗೂ ಬಂದಿದ್ದಾರೆ.ನೋಡೋಣ ಏನು ಮಾಡ್ತಿದ್ದಾರೆ ಅನ್ನೋದು.ತನಿಖೆ ಇಂದ ಎಲ್ಲವೂ ಹೊರಗೆ ಬರಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.