ADVERTISEMENT

ವಿಜಯಪುರ | ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಮಳಿಗೆಗೆ ಅವಕಾಶ ನೀಡದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 16:12 IST
Last Updated 25 ಡಿಸೆಂಬರ್ 2023, 16:12 IST
<div class="paragraphs"><p>ಸಿದ್ದೇಶ್ವರ ಜಾತ್ರೆ(ಸಂಗ್ರಹ ಚಿತ್ರ)</p></div>

ಸಿದ್ದೇಶ್ವರ ಜಾತ್ರೆ(ಸಂಗ್ರಹ ಚಿತ್ರ)

   

ವಿಜಯಪುರ: ‘ಮಕರ ಸಂಕ್ರಮಣದ ಸಂದರ್ಭದಲ್ಲಿ ವಿಜಯಪುರದಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂಯೇತರರಿಗೆ ಮಳಿಗೆ ಹಾಕಲು ಮತ್ತು ಯಾವುದೇ ರೀತಿಯ ವ್ಯಾಪಾರ ಮಾಡಲು ಅವಕಾಶ ನೀಡಬಾರದು’ ಎಂದು ಹಿಂದೂ ಸಂಘಟನೆಗಳ ಒಕ್ಕೂಟ ಶಾಸಕ ಯತ್ನಾಳ ಅವರಿಗೆ ಮನವಿ ಸಲ್ಲಿಸಿದೆ.

‘ರಾಜ್ಯದ ದೇವಾಲಯ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಇತ್ತೀಚಿನ ಸಭೆಯಲ್ಲಿ ಹಿಂದೂ ಜಾತ್ರೆ ಉತ್ಸವಗಳಲ್ಲಿ ಹಿಂದೂ ವ್ಯಾಪಾರಿಗಳು ಹೊರತುಪಡಿಸಿ ಅನ್ಯಕೋಮಿನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ನಿರ್ಧರಿಸಲಾಗಿದೆ. ಅದರಂತೆಯೇ ನಡೆದುಕೊಳ್ಳಬೇಕು’ ಎಂದು ಒಕ್ಕೂಟದ ಪದಾಧಿಕಾರಿಗಳು ಕೋರಿದ್ದಾರೆ.

ADVERTISEMENT

‘ಮುಸ್ಲಿಮರು ದೇಶದ ಕಾನೂನಿಗೆ ಗೌರವಿಸುತ್ತಿಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಾರೆ. ಅಂಥವರಿಗೆ ಹಿಂದೂ ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು’ ಎಂದು ಅವರು ಕೋರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.