ವಿಜಯಪುರ: ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ (65) ಸೋಮವಾರ ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಅವರು ಅವಿಭಜಿತ ವಿಜಯಪುರ ಜಿಲ್ಲೆಯ ಇಳಕಲ್ ಸಮೀಪದ ಬಲಕುಂದಿ ಗ್ರಾಮದವರು. ಅವರ ಮನೆಯಲ್ಲಿ ಪ್ರತಿ ಗುರುವಾರ ಭಜನೆ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಅವರ ಮನೆತನಕ್ಕೆ ಭಜನಿ ಜಹಾಗೀರದಾರ ಹೆಸರು ಬಂತು. ವಿಜಯಪುರದ ಸಂಗೀತ ಶಿಕ್ಷಕ ಕೇಶವರಾವ ಥಿಟೆ ಅವರ ಬಳಿ ಪ್ರಾಥಮಿಕ ಹಂತದ ಸಂಗಿತವನ್ನು ಕಲಿತರು.
ಶಿಕ್ಷಣ ಪೂರೈಸಿದ ಬಳಿಕ ಪಂಡಿತ ಭೀಮಸೇನ ಜೋಶಿ ಅವರ ಮನೆಯಲ್ಲಿ 12 ವರ್ಷ ಇದ್ದು, ಗುರುಶಿಷ್ಯ ಪರಂಪರೆ ಮುಂದುವರೆಸಿದರು. ದೇಶದ ವಿವಿಧೆಡೆ ಕಾರ್ಯಕ್ರಮ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.