ADVERTISEMENT

ವಿಜಯಪುರ | ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:20 IST
Last Updated 12 ಸೆಪ್ಟೆಂಬರ್ 2025, 5:20 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ವಿಜಯಪುರ: ನಗರದ ವಿವಿಧೆಡೆ ಇತ್ತೀಚೆಗೆ ಹಗಲಿನಲ್ಲೇ ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ನಗರದ ಹೌಸಿಂಗ್ ಬೋರ್ಡ್‌ ಬಳಿ ಅನುಮಾನಾಸ್ಪದವಾಗಿ ಅಟೋದಲ್ಲಿ ತಿರುಗಾಡುತ್ತಿದ್ದ ಆರೋಪಿಗಳನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ, ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ವಿಜಯಪುರ ನಗರದ ಝಂಡಾ ಕಟ್ಟೆಯ ಹಳಕೇರಿ ಗಲ್ಲಿಯ ಕೂಲಿ ಕಾರ್ಮಿಕ ಸಮೀರ ಇನಾಮದಾರ(23) ಮತ್ತು ಶಾಪೇಟೆಯ ಆಟೊ ಚಾಲಕ ಹಸನಡೊಂಗ್ರಿ ಮುಲ್ಲಾ(33) ಹಾಗೂ ನಿಸ್ಸಾರ ಮಡ್ಡಿಯ ಶಫೀಕ್ ಅಹ್ಮದ್‌ ಇನಾಮದಾರ (49) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಟ್ಟು 65 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬಜಾಜ್‌ ಕಂಪನಿಯ ಆಟೊ ರಿಕ್ಷಾ ಹಾಗೂ ಒಂದು ಕಬ್ಬಿಣದ ರಾಡ್‌ ಸೇರಿದಂತೆ ಒಟ್ಟು ₹8.37 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.