ADVERTISEMENT

ಇಂಡಿ: ತೊಗರಿ ಖರೀದಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 15:35 IST
Last Updated 17 ಫೆಬ್ರುವರಿ 2025, 15:35 IST
ಇಂಡಿ ಪಟ್ಟಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿಯಲ್ಲಿ ಸೋಮವಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ರೈತ ಮಲ್ಲನಗೌಡ ಹ.ಪಾಟೀಲ ಉದ್ಘಾಟಿಸಿದರು.  
ಇಂಡಿ ಪಟ್ಟಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿಯಲ್ಲಿ ಸೋಮವಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ರೈತ ಮಲ್ಲನಗೌಡ ಹ.ಪಾಟೀಲ ಉದ್ಘಾಟಿಸಿದರು.     

ಇಂಡಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸೋಮವಾರ ಇಂಡಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಇಂಡಿಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಯಿತು. 

ಬೋಳೇಗಾಂವ ಗ್ರಾಮದ ಹಿರಿಯ ರೈತ ಮಲ್ಲನಗೌಡ ಹ. ಪಾಟೀಲ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು. 

ಸಂಘದ ನಿರ್ದೇಶಕರಾದ ರಾಜೇಂದ್ರ ಪಾಟೀಲ, ಮಲ್ಲಪ್ಪ ಗುಡ್ಲ, ವಿಜಯಕುಮಾರ ನಿಡಗುಂದಿ, ರೈತರಾದ ತಡವಲಗಾ ಗ್ರಾಮದ ಕಲ್ಲಪ್ಪ ಘಂಟಿ, ನೀಲಕಂಠ ಹೊಟಗಿ, ಎಸ್.ಡಿ. ಬಗಲಿ, ಶಿವು ಅಲಮೇಲ, ಅಣ್ಣಾರಾಯ ಅಳೂರ (ವಕೀಲರು) ಕೆಂಚಪ್ಪ ಪೂಜಾರಿ, ಬಂದಗಿಸಾಬ ಮಾವಿನಹಳ್ಳಿ, ಸಂಘದ ವ್ಯವಸ್ಥಾಪಕ ಆರ್.ಜಿ. ಕಾವಿ, ಗೋಡಾವನ ನಿರ್ವಾಹಕ ಗಂಗಾಧರ ಹೊಸಮನಿ, ಕೃಷ್ಣಾಜಿ ಕುಲಕರ್ಣಿ, ಶಾಹಿದ ಭಂಡಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.