
ಇಂಡಿ: ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಎಕರೆ ಕಬ್ಬಿನ ಗದ್ದೆಯಲ್ಲಿ 172 ಟನ್ ಕಬ್ಬು ಬೆಳೆದು ಸಾಧನೆ ಮಾಡಿರುವ ರೈತ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆಯವರ ಕೃಷಿಕರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು.
ತಾಲೂಕಿನ ಲಚ್ಯಾಣ ಅಹಿರಸಂಗ ರಸ್ತೆಯಲ್ಲಿರುವ ಶ್ರೀಮಂತ ಇಂಡಿ ತೋಟದಲ್ಲಿ ನಡೆದ ಕಬ್ಬಿನ ತೂಕ ಕಬ್ಬಿನ ಕ್ಷೇತ್ರೋತ್ಸವ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮತ್ತು ಇಂಡಿ ತಾಲೂಕಿನ ಮತ್ತು ವಿಜಯಪುರದ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಕಿರಿಯ ಅಧಿಕಾರಿಗಳು ತಾಲೂಕಿನ ಮೂರು ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಮತ್ತು ಡಾ. ಶಿವಶಂತರ ಮೂರ್ತಿ ಮತ್ತು ನೂರಾರು ರೈತರ ಸಮ್ಮುಖದಲ್ಲಿ ತೂಕ ಮಾಡಿ ತೋರಿಸಲಾಯಿತು ಕಬ್ಬು ತಳಿ ಶಾಸ್ತ್ರ ವಿಜ್ಞಾನಿ ಸಂಕೇಶ್ವರದ ಸಂಜಯ ಪಾಟೀಲ ಪಾಲ್ಗೊಂಡಿದ್ದರು.
ರೈತರ ಸಾಧನೆಗೆ ಇಂಡಿ ಮತ್ತು ವಿಜಯಪುರ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ಸಿಬ್ಬಂದಿ ಕಬ್ಬು ಸಂಶೋಧಕರನ್ನು ಕಳುಹಿಸಿ ಮಾಹಿತಿ ಪಡೆದು ಇತರ ರೈತರಿಗೆ ಅನುಕೂಲವಾಗಲೆಂದು ಸುಮಾರು ಎರಡು ಸಾವಿರ ರೈತರನ್ನು ಸೇರಿಸಿ ಕಬ್ಬಿನ ಕ್ಷೇತ್ರೋತ್ಸವ ಕೂಡ ಶ್ರೀಮಂತ ಇಂಡಿಯವರ ಹೊಲದಲ್ಲಿಯೇ ಮಾಡಿ ಪ್ರಾತ್ಯಕ್ಷತೆಯ ಮೂಲಕ ಎಲ್ಲವನ್ನು ಎರಡು ದಿನಗಳ ವರೆಗೆ ರೈತರಿಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.