ADVERTISEMENT

ವಿಜಯಪುರ: ಗಮನ ಸೆಳೆದ ಭವ್ಯ ಶೋಭಾಯಾತ್ರೆ

ಸಾಯಿ ಗಾರ್ಡನ್‌ನಲ್ಲಿ ಬೃಹತ್‌ ಹಿಂದೂ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:08 IST
Last Updated 6 ಫೆಬ್ರುವರಿ 2026, 5:08 IST
<div class="paragraphs"><p>ವಿಜಯಪುರ ನಗರದಲ್ಲಿ ಗುರುವಾರ ಹಿಂದೂ ಸಮ್ಮೇಳನದ ಅಂಗವಾಗಿ ಭವ್ಯ ಶೋಭಾ ಯಾತ್ರೆ ನಡೆಯಿತು –ಪ್ರಜಾವಾಣಿ ಚಿತ್ರ</p></div>

ವಿಜಯಪುರ ನಗರದಲ್ಲಿ ಗುರುವಾರ ಹಿಂದೂ ಸಮ್ಮೇಳನದ ಅಂಗವಾಗಿ ಭವ್ಯ ಶೋಭಾ ಯಾತ್ರೆ ನಡೆಯಿತು –ಪ್ರಜಾವಾಣಿ ಚಿತ್ರ

   

ವಿಜಯಪುರ: ಆರ್‌ಎಸ್‌ಎಸ್‌ಗೆ ಶತಮಾನೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಹಿಂದೂ ಸಮ್ಮೇಳನದ ಅಂಗವಾಗಿ ಭವ್ಯ ಶೋಭಾ ಯಾತ್ರೆ ನಡೆಯಿತು. 

ನಗರದ ಶಿವಾಜಿ ಸರ್ಕಲ್‌ನಲ್ಲಿ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ ಅವರು ಗೋ ಪೂಜೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ADVERTISEMENT

ಸಾಯಿ ಉದ್ಯಾನದವರೆಗೆ ಭವ್ಯ ಶೋಭಾಯಾತ್ರೆಯಲ್ಲಿ ಹಿಂದೂ ದೇವರು ಹಾಗೂ ಹಿಂದೂ ನಾಯಕರ ಮೂರ್ತಿ, ಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಆರ್‌ಎಸ್‌ಎಸ್‌ಗೆ ನೂರು ವರ್ಷ ಸಂದ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಿಂದೂ ಸಮಾವೇಶ ಮಾಡಲಾಗುತ್ತಿದೆ. ನಮ್ಮಲ್ಲಿರೋ ಒಳ ಪಂಗಡ, ಅಸಮಾನತೆ ವಿರುದ್ಧ ಜಾಗೃತಿ ಮೂಡಿಸಲು ಸಮ್ಮೇಳನ ಮಾಡಲಾಗುತ್ತಿದೆ. ರಾಜ್ಯದಲ್ಲಿ 3000 ಹಿಂದೂ ಸಮಾವೇಶಗಳನ್ನು ಮಾಡುತ್ತಿದ್ದೇವೆ’ ಎಂದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ಜಾತಿ ಮತ್ತು ಪ್ರಾದೇಶಿಕತೆ ಹೆಸರಲ್ಲಿ ಪ್ರತ್ಯೇಕಗೊಳ್ಳದೇ ಹಿಂದುಗಳೆಲ್ಲರೂ ಒಟ್ಟಾದಾಗ ಮಾತ್ರ ಭಾರತ ಹಿಂದೂ ರಾಷ್ಟ್ರ ಎಂಬ ಘೋಷಣೆ ಮೊಳಗಲು ಸಾಧ್ಯ’ ಎಂದು ಹೇಳಿದರು.

‘ಭಾರತದಲ್ಲಿ ಮದುವೆ ಮತ್ತು ರಾಜಕಾರಣದಲ್ಲಿ ಜಾತಿ ವಿಚಾರಗಳು ಉದ್ಭವಿಸುತ್ತಿವೆಯಾದರೂ, ಅಸಲಿಗೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಿದ್ದಾರೆ. ಈ ಒಗ್ಗಟ್ಟಿನ ಫಲವೇ ಇಂದು ಭಾರತದ ಚಿತ್ರಣ ಬದಲಾಗಿದೆ’ ಎಂದರು.

‘ಹಿಂದೂಗಳು ಒಗ್ಗಟ್ಟಾಗಿದ್ದರಿಂದಲೇ ರಾಮಮಂದಿರದ ನಿರ್ಮಾಣ ಸಾಧ್ಯವಾಯಿತು. ಕಾಶಿ-ಮಥುರಾ ಕೂಡಾ ಪುನರುಜ್ಜೀವನಗೊಳ್ಳುವ ದಿನಗಳು ದೂರವಿಲ್ಲ. ಕಾಶಿಯಲ್ಲಿ ಈಗಿರುವ ವಿಗ್ರಹ ಮೂಲ ವಿಗ್ರಹವಲ್ಲ. ಅಹಲ್ಯಾಬಾಯಿ ಹೋಳ್ಕರ್ ಅವರು ಮುಸ್ಲಿಂ ದಾಳಿ ಸಂದರ್ಭ ಪ್ರತ್ಯೇಕವಾಗಿ ನಿರ್ಮಿಸಿದ ವಿಗ್ರಹ. ಈಗಲೂ ನಂದಿ ಮೂಲ ವಿಗ್ರಹದೆಡೆಗೆ ನೋಡುತ್ತಲೇ ಇದ್ದಾನೆ. ಹೀಗಾಗಿ ಕಾಶಿ ಕೂಡ ಮೂಲ ಸ್ವರೂಪ ಪಡೆಯುವ ದಿನಗಳು ಬರಲಿವೆ’ ಎಂದರು.

ಸಂಚಲನಾ ಸಮಿತಿ ಅಧ್ಯಕ್ಷ ಶಂಕರ ಬನ್ನೂರ, ಸುನಿತಾ ಪಾಟೀಲ, ವಿಜಯ ಎಸ್. ಚವಾಣ್ ಇದ್ದರು. ಸಮಾವೇಶಕ್ಕೂ ಮುನ್ನ ನಗರದ ವಿವಿಧ ಭಾಗಗಳಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.