ADVERTISEMENT

ಇಂಡಿಯನ್ ಸ್ಯಾಟಲೈಟ್ ಸೆಂಟರ್ ಸಾಧನೆ ಮಹತ್ವದ್ದು: ವಿಜ್ಞಾನಿ ಚಿದಂಬರ್ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:35 IST
Last Updated 9 ಅಕ್ಟೋಬರ್ 2025, 4:35 IST
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮವನ್ನು ವಿಜ್ಞಾನಿ ಚಿದಂಬರ್ ಕುಲಕರ್ಣಿ ಉದ್ಘಾಟಿಸಿದರು.  
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮವನ್ನು ವಿಜ್ಞಾನಿ ಚಿದಂಬರ್ ಕುಲಕರ್ಣಿ ಉದ್ಘಾಟಿಸಿದರು.     

ಇಂಡಿ: ದೇಶದ ಬಾಹ್ಯಾಕಾಶ ಸಾಧನೆಯ ಪಯಣದಲ್ಲಿ ಇಂಡಿಯನ್ ಸ್ಯಾಟಲೈಟ್ ಸೆಂಟರ್ (ಐಎಎಸ್‌ಸಿ) ಕೇಂದ್ರವು ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿದೆ. ಇದು ಬೆಂಗಳೂರಿನಲ್ಲಿ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಈ ಉಪಗ್ರಹ ಕೇಂದ್ರವನ್ನು ಮೊದಲು ಇಂಡಿಯನ್ ಸ್ಯಾಟ್ಲೈಟ್ ಸೆಂಟರ್ ಎಂದು 1972ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಯ ವಿಜ್ಞಾನಿಗಳು ಭಾರತದ ಮೊದಲ ಉಪಗ್ರಹವಾದ ಆರ್ಯಭಟ ಉಪಗ್ರಹವನ್ನು ವಿನ್ಯಾಸಗೊಳಿಸಿದರು. ವಿನ್ಯಾಸಗೊಳಿಸಿದ ಈ ಉಪಗ್ರಹವನ್ನು 1975ರಲ್ಲಿ ಸೋವಿಯತ್ ಯೂನಿಯನ್ನಿಂದ ಉಡಾಯಿಸಲಾಯಿತು ಎಂದು ಯು. ಆರ್.ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿ ಚಿದಂಬರ್ ಕುಲಕರ್ಣಿ ಹೇಳಿದರು.

ಬುಧವಾರ ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್ ದೋಶಿ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂಡಿಯನ್ ಸ್ಯಾಟಲೈಟ್ ಸೆಂಟರ್ ಸ್ಥಾಪನೆಯ ಹಿಂದೆ ಡಾ. ಯು. ಆರ್. ರಾವ್ ಅವರ ಅದ್ಭುತ ಶ್ರಮವಿದೆ. ಅವರ ನೇತೃತ್ವದಲ್ಲಿ ಭಾರತವು ಸ್ವದೇಶಿ ಉಪಗ್ರಹಗಳನ್ನು ನಿಮರ್ಿಸುವ ಸಾಮಥ್ರ್ಯವನ್ನು ಗಳಿಸಿಕೊಂಡಿತು. ದೂರಸಂಪರ್ಕ, ಹವಾಮಾನ, ನಾವಿಗೇಶನ್ ಹಾಗೂ ವೈಜ್ಞಾನಿಕ ಸಂಶೋಧನೆಗೆ ಬಳಸುವ ಅನೇಕ ಉಪಗ್ರಹಗಳನ್ನು ಈ ಕೇಂದ್ರ ನಿರ್ಮಿಸಿದೆ ಎಂದರು.

ADVERTISEMENT

ಕಾರ್ಯಕ್ರಮದಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿಜ್ಞಾನಿ ಉಮಾಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ನೀಲಕಂಠಗೌಡ ಪಾಟೀಲ ಮಾತನಾಡಿ, ವಿಶ್ವ ಅಂತರಿಕ್ಷ ಸಪ್ತಾಹವು ಕೇವಲ ವಿಜ್ಞಾನಿಗಳ ಹಬ್ಬವಲ್ಲ. ಅದು ಪ್ರತಿಯೊಬ್ಬ ಭಾರತೀಯನ ಹಬ್ಬ. ಈ ಹಬ್ಬ ತಂತ್ರಜ್ಞಾನ ಪ್ರಗತಿಯ ಸಂಕೇತವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಮೆಮರಿ ಟೆಸ್ಟ್, ಪಿಕ್ & ಸ್ಪೀಕ್ ಮತ್ತು ಕ್ವಿಜ್ ಸ್ಪರ್ಧೆ ನಡೆಸಲಾಯಿತು. ಇಂಡಿ ತಾಲ್ಲೂಕಿನ 50 ಪ್ರೌಢ ಶಾಲೆಗಳ 800 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಿಗೆ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್‌ನಿಂದ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಕೋಶಾಧ್ಯಕ್ಷ ಸಾತಪ್ಪ ತೆನ್ನಳ್ಳಿ, .ರಾಜಕುಮಾರ ಎನ್. ಪಾಟೀಲ, ವಿಜ್ಞಾನಿ ಜಗದೇವಿ ಪಾಟೀಲ, ಶಾಂತುಗೌಡ ಬಿರಾದಾರ, ಶಿಕ್ಷಕ ಅಬ್ದುಲ್ ಹವಾಲದಾರ, ಮುಖ್ಯಗುರು ರಾಘವೇಂದ್ರ ಕುಲಕರ್ಣಿ ಮಹಾಂತೇಶ ಹೂಗಾರ ಇದ್ದರು.  ಸ್ವೇತಾ ಕಾಂತ ನಿರೂಪಿಸಿದರು. ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಸ್ವಾಗತಿಸಿದರು. ದಾನಮ್ಮ ಪಾಟೀಲ ಶೃತಿ ಪಾಟೀಲ ಪ್ರಾರ್ಥಿಸಿದರು. ಜಯಪ್ರಸಾದ ಡಿ. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.