ADVERTISEMENT

ಮಳೆಗಾಲದ ಕಾಯಿಲೆಗೆ ಮುನ್ನೆಚ್ಚರಿಕೆಯೇ ಮದ್ದು

‘ಪ್ರಜಾವಾಣಿ’ ಸಂದರ್ಶನ

ಬಾಬುಗೌಡ ರೋಡಗಿ
Published 15 ಜೂನ್ 2019, 19:45 IST
Last Updated 15 ಜೂನ್ 2019, 19:45 IST

ವಿಜಯಪುರ: ಬೇಸಿಗೆ ಕಳೆದು ಮುಂಗಾರು ಆರಂಭಗೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ಚಳಿ ಕಚಗುಳಿ ಇಡುತ್ತಿದೆ. ಈ ವೇಳೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮಳೆಗಾಲದ ಆರಂಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು, ಮಕ್ಕಳನ್ನು ಅನಾರೋಗ್ಯದಿಂದ ದೂರವಿರಿಸುವುದು ಹೇಗೆ, ಉಡುಗೆ–ತೊಡುಗೆ, ಆಹಾರಕ್ಕೆ ಸಂಬಂಧಿಸಿದಂತೆ ಏನೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ. ಮಹೇಂದ್ರ ಕಾಪಸೆ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

* ಬೇಸಿಗೆ ಕಳೆದು ಮಳೆಗಾಲ ಆರಂಭ ಗೊಂಡಿದೆ. ಮಳೆ ಮತ್ತು ಚಳಿ ಎರಡೂ ಒಟ್ಟಿಗೆ ಬರುವುದರಿಂದ ಆರೋಗ್ಯದ ಕಾಳಜಿ ಹೇಗೆ ಮಾಡಿಕೊಳ್ಳಬೇಕು?

ADVERTISEMENT

–ಮಳೆ ನೀರು ರಸ್ತೆ ಮೇಲೆ ಹರಿದು ಕುಡಿಯುವ ನೀರಿನ ಮೂಲದಲ್ಲಿ ಬೆರೆಯದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ಮಲಿನ ನೀರು ಮಿಶ್ರಣಗೊಂಡು, ಆ ನೀರನ್ನು ಸೇವಿಸಿದರೆ ಆರೋಗ್ಯದಲ್ಲಿ ಏರುಪೇರಾ ಗುತ್ತದೆ. ಕೊಳವೆಬಾವಿ, ತೆರೆದ ಬಾವಿಗಳಿಗೆ ನೀರು ಸೇರದಂತೆ ನೋಡಿಕೊಳ್ಳಬೇಕು. ತಗ್ಗು ಪ್ರದೇಶ ಗಳಲ್ಲಿ ಪೈಪ್‌ಗಳು ಒಡೆದಿದ್ದರೆ ದುರಸ್ತಿಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀರಿನ ಮೂಲಗಳ ಪಟ್ಟಿ ಇರುತ್ತದೆ. ಮೂರು ತಿಂಗಳಿಗೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳು ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸುತ್ತಾರೆ. ಅವಶ್ಯವಿದ್ದರೆ ಕ್ರಮಕ್ಕೆ ಸೂಚಿಸುತ್ತಾರೆ.

* ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಕಾಯಿಲೆಗಳು ಯಾವುವು?

ವಾತಾವರಣ ಬದಲಾಗುವುದರಿಂದ ಸಣ್ಣಪುಟ್ಟ ಕಾಯಿಲೆಗಳು ಬರುತ್ತವೆ. ಈ ವೇಳೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆಸ್ತಮಾ, ಟೈಫಾಯಿಡ್, ಕಾಲರಾ, ಕಾಮಾಲೆ ರೋಗಗಳು ಬರುವ ಸಾಧ್ಯತೆ ಇದೆ.

* ಆರೋಗ್ಯ ರಕ್ಷಣೆಗೆ ಕೈಗೊಳ್ಳಬೇ ಕಾದ ಕ್ರಮಗಳು ಏನು?

ಮನೆ, ಆವರಣ, ಸುತ್ತಲಿನ ಪರಿ ಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ತಿನ್ನುವ ಆಹಾ ಸ್ವಚ್ಛವಾಗಿರಬೇಕು. ಹೊರ ಗಿನಿಂದ ಮನೆಗೆ ಬಂದಾಗ ಕೈಕಾಲು ತೊಳೆದುಕೊಂಡು ಒಳಗೆ ಹೋಗಬೇಕು.

* ಚಿಕ್ಕ ಮಕ್ಕಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು.
ಮಳೆಯಲ್ಲಿ ಮಕ್ಕಳನ್ನು ಬಿಡಬಾರದು. ತಲೆ ತೋಯಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಮಕ್ಕಳನ್ನು ಸ್ವಚ್ಛವಾಗಿ ಡಬೇಕು. ಬರಿಗಾಲಲ್ಲಿ ನಡೆದಾಡಲು ಬಿಡಬಾರದು.

* ಉಡುಪು, ಆಹಾರ ಶೈಲಿ ಬದಲಾಯಿಸಬೇಕೆ?
ಇಂತದ್ದೆ ಆಹಾರ ಸೇವಿಸೇಕು ಎಂದೇ ನಿಲ್ಲ. ಇಷ್ಟವಾದ ಆಹಾರ ತಿನ್ನಬಹುದು. ಆದರೆ, ಗುಣಮಟ್ಟದಲ್ಲಿ ರಾಜಿಯಾಗದಂತೆ ನೋಡಿಕೊಳ್ಳಬೇಕು. ರಸ್ತೆ ಬದಿಯ ಆಹಾರ ಸೇವಿಸುವ ಮೊದಲು ಸುತ್ತಮುತ್ತಲಿನ ಸ್ವಚ್ಛತೆ, ಆಹಾರ ಸ್ವಚ್ಛವಾಗಿದೆಯೇ ಎಂಬು ದನ್ನು ಅರಿತು ತಿನ್ನಬೇಕು. ಮಳೆಯಲ್ಲಿ ಜರ್ಕಿನ್‌ ಬಳಸಿದರೆ
ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.