ADVERTISEMENT

ಜೆ.ಎಚ್.ಪಟೇಲ್‌ ಕಲಿತ ಶಾಲೆಗೆ ಕಾಯಕಲ್ಪ: ಸಂಸದ ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:21 IST
Last Updated 16 ಜೂನ್ 2025, 15:21 IST
   

ವಿಜಯಪುರ: ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ ಅವರು ಕಲಿತ ದಾವಣಗೆರೆ ಜಿಲ್ಲೆಯ ಕಾರಿಗನೂರು ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವುದಾಗಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಜೆ.ಎಚ್. ಪಟೇಲರು ನಮ್ಮ ಜೊತೆಯಲ್ಲಿಲ್ಲ. ಆದರೆ, ಅವರು ಕಲಿತ ಶಾಲೆ ಇನ್ನೂ ಇದೆ. ಕಾರಿಗನೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ 17 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿಗಳು ಮಾತ್ರ ಉಳಿದಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ನಾನೇ ಸ್ವತಃ ಶಾಲೆ ಕಟ್ಟಿಸುತ್ತೇನೆ’ ಎಂದರು. 

‘ಜೆ.ಎಚ್. ಪಟೇಲ್‌ ಮತ್ತು ರಾಮಕೃಷ್ಣ ಹೆಗಡೆ ಅವರು ನನ್ನ ರಾಜಕೀಯ ಗುರುಗಳು. ನಮ್ಮ ತೋಟದಲ್ಲಿ ನಿರ್ಮಿಸಿರುವ ಮನೆಗೆ  ಹೆಗಡೆ ಹಾಗೂ ಪಟೇಲ್‌ ಎಂದು ನಾಮಕರಣ ಮಾಡುವ ಮೂಲಕ ಅವರನ್ನು ನಿತ್ಯ ಸ್ಮರಿಸುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.