
ಮುದ್ದೇಬಿಹಾಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುದ್ದೇಬಿಹಾಳ ತಾಲ್ಲೂಕು ಘಟಕಕ್ಕೆ ಈಚೆಗೆ 2025-28ರ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಿ.ಬಿ.ವಡವಡಗಿ, ಉಪಾಧ್ಯಕ್ಷರಾಗಿ ಬಸವರಾಜ ಹುಲಗಣ್ಣಿ, ಢವಳಗಿ ಭಾಗದ ಜಿ.ಎನ್.ಬಿರಗೊಂಡ (ಮುತ್ತು), ಕಾರ್ಯದರ್ಶಿಗಳಾಗಿ ಲಾಡ್ಲೇಮಶ್ಯಾಕ ಶೇಖ್ (ನದಾಫ್), ನಾಲತವಾಡ ಭಾಗದ ಕಾಶಿನಾಥ ಬಿರಾದಾರ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಆರ್.ಬಾಗವಾನ, ಖಜಾಂಚಿಯಾಗಿ ಎ.ಎಲ್.ಮುಲ್ಲಾ ಅವರು ಅವಿರೋಧವಾಗಿ ಆಯ್ಕೆಯಾದರು. ಕಾನಿಪ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಕಾಶ ಬೆಣ್ಣೂರ, ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಕಾರ್ಯದರ್ಶಿ ಅವಿನಾಶ ಬಿದರಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 35 ಸದಸ್ಯರ ಪೈಕಿ ಮತದಾನಕ್ಕೆ 30 ಸದಸ್ಯರು ಅರ್ಹತೆ ಹೊಂದಿದ್ದರು. ಇವರಲ್ಲಿ 28 ಸದಸ್ಯರು ಮತ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.