
ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳದ ಎಸ್.ಎಸ್.ಶಿವಾಚಾರ್ಯರ ಸ್ವಾತಂತ್ರ್ಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ ಕಾಲೇಜು ತಂಡ ವಿಜಯಪುರ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಈ ಕಾಲೇಜಿನ ಮೂವರು ಆಟಗಾರರು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ ಹಾಗೂ ಅನೀಲ ತಳಗೇರಿ ಆಯ್ಕೆಯಾದ ಕ್ರೀಡಾಪಟುಗಳು.
ಸ್ಪರ್ಧೆಯಲ್ಲಿ ಸಂದೀಪ ಚವ್ಹಾಣ ಅತ್ಯುತ್ತಮ ದಾಳಿಗಾರನಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ವಿಜಯಪೂರ ಜಿಲ್ಲೆಯ ಪಿಯು ಡಿಡಿ ಚಂದ್ರಶೇಖರ ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕಾಲೇಜಿನ ಕಾರ್ಯದರ್ಶಿ ರವಿ ನಾಯಕ, ಕಾಲೇಜಿನ ಪ್ರಾಚಾರ್ಯರಾದ ಆಯ್.ಎ.ಬಿರಾದಾರ , ತರಬೇತಿದಾರ ಬಸವರಾಜ ಚಿನ್ನಾಪೂರ, ತಂಡದ ಮ್ಯಾನೇಜರ ಚೇತನ ರಾಠೋಡ, ಸಿಬ್ಬಂದಿ ಅಭಿನಂದಿಸಿದ್ದಾರೆ.
ರಾಜ್ಯಮಟ್ಟದ ತಂಡದಲ್ಲಿ ವಿಜಯಪುರ ಜಿಲ್ಲಾ ತಂಡವನ್ನು ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ, ಅನೀಲ ತಳಗೇರಿ, ಶಿವ ರಾಠೋಡ,ಭರತ ಕಾಂಬಳೆ, ಸಂಪತ್ ತೊರ್ಲಿ, ದರ್ಶನ ಹುಗ್ಗಿನ್ನವರ, ಆಕಾಶ ಪೂಜಾರಿ, ಅಬ್ದುಲರಜಾಕ ಮಕಾನದಾರ, ಪ್ರಜ್ವಲ ಈಟಿ, ಸಂದೀಪ ಗಾಯಕವಾಡ, ದೇವಾಂಶ ದಯನ್ನವರ ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.