
ಸಿಂದಗಿ: ‘ನಗರದ ಸಾರಿಗೆ ಘಟಕದಲ್ಲಿ 104 ಅನುಸೂಚಿಗಳು ಕಾರ್ಯಾಚರಣೆಯಲ್ಲಿವೆ. ಆದರೆ ಘಟಕದಲ್ಲಿ 105 ಬಸ್‌ಗಳಿವೆ. ದೈನಂದಿನ ಕಾರ್ಯಾಚರಣೆಗೆ 30 ಬಸ್‌ಗಳ ಕೊರತೆ ಇದೆ’ ಎಂದು ಘಟಕದ ಸಿಬ್ಬಂದಿ ಶಾಸಕ ಅಶೋಕ ಮನಗೂಳಿಯವರಿಗೆ ತಿಳಿಸಿದರು.
ನಗರದ ಸಾರಿಗೆ ಘಟಕದಲ್ಲಿ ಮಂಗಳವಾರ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಗತ್ಯ ಬೇಡಿಕೆಗಳನ್ನು ಸಿಬ್ಬಂದಿ ಪ್ರಸ್ತಾಪಿಸಿದರು.
‘ಘಟಕದ ಸಿಬ್ಬಂದಿ ವಾಸಕ್ಕಾಗಿ 30 ವಸತಿ ಗೃಹಗಳ ನಿರ್ಮಾಣ ಆಗಬೇಕು. ಘಟಕದ ಕಾರ್ಯಾಲಯದ ಕೊಠಡಿಗಳ ದುರಸ್ತಿಯಾಗಬೇಕು ಹಾಗೂ ಇಲ್ಲಿಯ ಪೂಜ್ಯ ಚೆನ್ನವೀರಸ್ವಾಮೀಜಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಬೇಕು’ ಎಂಬ ಪ್ರಮುಖ ಮೂರು ವಿಷಯಗಳ ಚರ್ಚೆ ನಡೆಯಿತು.
ಸಾರಿಗೆ ಘಟಕದ ಸಿಬ್ಬಂದಿ ಬೇಡಿಕೆಗಳನ್ನು ಆಲಿಸಿದ ಶಾಸಕ ಮನಗೂಳಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕೆಎಸ್ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಹಿರೇಮಠ ಸಭೆಯಲ್ಲಿ ಹಾಜರಿದ್ದು ಬೇಡಿಕೆಗಳ ಬಗ್ಗೆ ಮೌಖಿಕವಾಗಿ ಶಾಸಕರಿಗೆ ಮನವಿ ಮಾಡಿಕೊಂಡರು.
ಸಾರಿಗೆ ನಿಯಂತ್ರಕ ಎಂ.ಬಿ.ಪೂಜಾರಿ, ಸಾರಿಗೆ ಇಲಾಖೆ ಎಇಇ ಮಲ್ಲಿಕಾರ್ಜುನ ಬಿರಾದಾರ, ನಗರ ಸಾರಿಗೆ ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ, ಶ್ರೀಕಾಂತ ಮೆಟಗಾರ, ಶಿವಶರಣ ಹೊಸಮನಿ, ಅರವಿಂದ, ಗೌಡಪ್ಪಗೌಡ ಹಂದ್ರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.