ADVERTISEMENT

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವ: ಶಾಸಕ ನಾಡಗೌಡ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:37 IST
Last Updated 15 ಡಿಸೆಂಬರ್ 2025, 5:37 IST
<div class="paragraphs"><p>ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-2 ನೂತನ ಕಟ್ಟಡವನ್ನು ಭಾನುವಾರ ಶಾಸಕ ಸಿ.ಎಸ್.ನಾಡಗೌಡ,ಗ್ರಾಪಂ ಅಧ್ಯಕ್ಷೆ ರೂಪಾ ಚಲವಾದಿ ಉದ್ಘಾಟಿಸಿದರು.</p></div>

ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-2 ನೂತನ ಕಟ್ಟಡವನ್ನು ಭಾನುವಾರ ಶಾಸಕ ಸಿ.ಎಸ್.ನಾಡಗೌಡ,ಗ್ರಾಪಂ ಅಧ್ಯಕ್ಷೆ ರೂಪಾ ಚಲವಾದಿ ಉದ್ಘಾಟಿಸಿದರು.

   

ಮುದ್ದೇಬಿಹಾಳ: ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವ ಕಳಿಸಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-2 ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಈ ಕ್ಷೇತ್ರದಲ್ಲಿ ಆರ್.ಎಂ.ಎಸ್.ಎ ಶಾಲೆ, ಮಹಿಳಾ ಹಾಸ್ಟೆಲ್,ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು ಇದೊಂದು ವಿದ್ಯಾಗಿರಿ ಎಂದು ನಾಮಕರಣ ಮಾಡುವಂತೆ ಗ್ರಾ.ಪಂ ಅಧ್ಯಕ್ಷರಿಗೆ ಮನವಿ ಮಾಡಿದರು.

’2017-18 ರಲ್ಲಿ ಶಾಲೆ ಆರಂಭವಾಗಿದೆ. 2022-23ರಲ್ಲಿ ಕಾಮಗಾರಿಗೆ ಆದೇಶ ನೀಡಿದ್ದು 2025-2026ರಲ್ಲಿ ಮುಗಿದಿದೆ. ಬರಲಿರುವ ದಿನಗಳಲ್ಲಿ 860 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯಲಿದ್ದಾರೆ. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಜೊತೆಗೆ ಮಾತನಾಡಿದ್ದು ಕನಿಷ್ಠ ₹10 ಕೋಟಿ ನೀಡುವಂತೆ ಬೇಡಿಕೆ ಇರಿಸಿದ್ದೇನೆ’ ಎಂದರು.

ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮಕ್ಕಳು ಶಿಕ್ಷಣವಂತರಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ,ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಚಾರ್ಯ ಖೇಮು ರಾಠೋಡ, ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ, ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ನಿರ್ದೇಶಕ ಸುರೇಶಗೌಡ ಪಾಟೀಲ ಇಂಗಳಗೇರಿ,ಸಂಗನಗೌಡ ಬಿರಾದಾರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಜು ಕಲ್ಬುರ್ಗಿ,ವಕೀಲರಾದ ಎಂ.ಎ.ಮುದ್ದೇಬಿಹಾಳ,ಎನ್.ಆರ್.ಗುರಿಕಾರ,ಎA.ಎA.ಬೆಳಗಲ್,ಟ್ರಿನಿಜ್ ಗ್ರೂಪ್‌ನ ಪ್ರವೀಣ ನಾಯಕ, ರವಿ ನಾಯಕ,ಈರಣಗೌಡ ಪಾಟೀಲ,ವೆಂಕಟೇಶ ನಾಯಕ,ಗೋಪಿ ಮಡಿವಾಳರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.