ಇಂಡಿ: ತಾಲ್ಲೂಕಿನ ಲಚ್ಯಾಣದಲ್ಲಿ ಸೆ.13 ಮತ್ತು 14ರಂದು ಜರುಗಲಿರುವ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆಯಲ್ಲಿ ಪಾಲ್ಗೊಳ್ಳಲು ಅಪಾರ ಭಕ್ತರು ಆಗಮಿಸುವ ಹಿನ್ನೆಲೆ ಗ್ರಾಮದ ಮೂಲಕ ಸಂಚರಿಸುವ ಗೋಳಗುಂಬಜ್ ಮತ್ತು ಬಸವ ಎಕ್ಸ್‌ಪ್ರೆಸ್ ರೈಲುಗಳು ಸೆ.12ರಿಂದ 15ರ ವರೆಗೆ ತಾತ್ಕಾಲಿಕ ನಿಲುಗಡೆ ಮಾಡಬೇಕು ಎಂದು ಸಂಬಂಧಿಸಿದ ರೈಲು ಅಧಿಕಾರಿಗಳಿಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಸೂಚಿಸಿದ್ದಾರೆ.
ಈ ನಿಲ್ದಾಣದಿಂದ ಸೋಲಾಪುರದಿಂದ ಬಾಗಲಕೋಟೆಯತ್ತ ಸಂಚರಿಸುವ ಬಸವ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ ಮತ್ತು ಸಂಜೆ ನಿಲ್ಲಿಸಲಾಗುವುದು. ಇದೇ ನಿಲ್ದಾಣದಿಂದ ವಿಜಯಪುರದಿಂದ ಪಂಢರಾಪುರದತ್ತ ಸಂಚರಿಸುವ ಗೋಳಗುಂಬಜ್ ರೈಲು ಬೆಳಿಗ್ಗೆ ಮತ್ತು ಸಂಜೆ ನಿಲ್ಲಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಠಕ್ಕೆ ಬರುವ ದೂರದ ಯಾತ್ರಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳ ವಿನಂತಿಯ ಮೇರೆಗೆ ಅಮೇರಿಕಾ ಪ್ರವಾಸದಲ್ಲಿರುವ ನಿಕಟ ಪೂರ್ವ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ದೂರವಾಣಿಯ ಮೂಲಕ ಸಚಿವ ವಿ. ಸೋಮಣ್ಣ ಅವರನ್ನು ವಿನಂತಿಸಿದಾಗ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವರ ಸಹಾಯಕ ಮಂಜುನಾಥ ವಂದಾಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.