ADVERTISEMENT

ಜ್ಞಾನದ ಜ್ಯೋತಿ ಪ್ರಜ್ವಲಿಸಲಿ: ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:00 IST
Last Updated 24 ಅಕ್ಟೋಬರ್ 2025, 6:00 IST
ಹೊರ್ತಿಯ ರೇವಣಸಿದ್ಧೇಶ್ವರ ಹಳೆ ಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು
ಹೊರ್ತಿಯ ರೇವಣಸಿದ್ಧೇಶ್ವರ ಹಳೆ ಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು   

ಹೊರ್ತಿ: ‘ಜ್ಞಾನದ ಜ್ಯೋತಿ ಎಲ್ಲರ ಮನೆ, ಮನದಲ್ಲೂ ಪ್ರಜ್ವಲಿಸಿ, ಒಳತು ಕರುಣಿಸಲಿ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ರೇವಣಸಿದ್ಧೇಶ್ವರ ಹಳೆ ಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ 9ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಬ್ಬಗಳಿಂದ ಭಾರತೀಯರಲ್ಲಿ ಭಾವೈಕ್ಯದ ಭಾವನೆಗಳು ಜನರಲ್ಲಿ ಮೂಡಲಿದೆ. ದೀಪಾವಳಿ ಜ್ಞಾನದ ಸಂಕೇತವಾಗಿದೆ. ಮನೆಯ ಕತ್ತಲೆ ಕಳೆದು ಆಧ್ಯಾತ್ಮಿಕ ಜ್ಞಾನ ಬೆಳಕು ನೀಡಲಿ ಎಂದರು.

ADVERTISEMENT

ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯ ಮಾತನಾಡಿ, ‘ದೀಪಾವಳಿ ಹಬ್ಬ ಭಾರತೀಯ ಭವ್ಯ ಪರಂಪರೆ ಹಬ್ಬವಾಗಿದೆ. ದೇಶ ವಿದೇಶಗಳಲ್ಲಿ ಜಾತಿ, ಧರ್ಮವನ್ನೇ ಮೀರಿ ಆಚರಿಸುವ ಬೆಳಕಿನ ಹಬ್ಬವಾಗಿದೆ’ ಎಂದು ತಿಳಿಸಿದರು.

ರೇವಣಸಿದ್ಧೇಶ್ವರ ದೇವಸ್ಥಾನ ಅಧ್ಯಕ್ಷ ಎ.ಎಸ್. ಖೈನೂರ ಮಾತನಾಡಿ, ‘ರೇವಣಸಿದ್ಧೇಶ್ವರ ಹಳೇ ದೇವಸ್ಥಾನದ ಆವರಣದಲ್ಲಿ 136 ಅಡಿ ಎತ್ತರದ ಬೃಹತ್ ಶಿವಲಿಂಗದ ಕಟ್ಟಡದ ಕಾರ್ಯ ಭರದಿಂದ ನಡೆದಿದೆ. 2027ರ ಯುಗಾದಿಗೆ ಕಾರ್ಯ ಪೂರ್ಣಗೊಂಡು ಉದ್ಘಾಟನೆಗೆ ಅಣಿಯಾಗಲಿದೆ. ನಂತರ ಹಳೇ ಗುಡಿಯ ಉತ್ತರಕ್ಕೆ ಈಗಾಗಲೇ ಬೃಹತ್ ರಾಜ ಗೋಪುರವಿದೆ. ಇದರಂತೆ ಇನ್ನೂ 6 ರಾಜಗೋಪುರ ಮಾಡಲು ಉದ್ದೇಶಿಸಲಾಗಿದೆ. ತ್ರಿಕೊಟಿ ಲಿಂಗಗಳ ಸ್ಥಾಪನೆಯು ನಡೆಲಿದೆ’ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಬಿ.ಜಿ. ಸಾವಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಣ್ಣಪ್ಪಗೌಡ ಪಾಟೀಲ, ಎಂಜಿನಿಯರ್ ಎಂ.ಎಸ್. ದಂಧರಗಿ, ಜೆ.ಎಸ್. ಪೂಜಾರಿ, ಗುರಪ್ಪ ಪೂಜಾರಿ, ಬಿ.ಜಿ. ಸಾವಕಾರ, ಶ್ರೀಮಂತ ಇಂಡಿ, ಎಸ್.ಎಸ್. ಪೂಜಾರಿ, ರಾಮಚಂದ್ರ ವಿ. ಪೂಜಾರಿ, ಕಾಂತು ಡೊಳ್ಳಿ, ದಾನಪ್ಪ ದುರ್ಗದ, ಶ್ರೀಶೈಲ ಶಿವೂರ, ಶಿವಾನಂದ ಮೇತ್ರಿ, ಮಲ್ಲು ಬಬಲಾದಿ, ಬಸವರಾಜ ವಿ.ಪತ್ತಾರ, ಎಸ್ ಎಸ್.ಪೂಜಾರಿ, ಎಸ್ ಎಸ್.ಪೂಜಾರಿ, ಶರಣು ಡೋಣಗಿ ಮಲ್ಲು ಬಾಬಲಾದಿ, ಬಸು ಜಂಬಗಿ ಇದ್ದರು. ಎಸ್.ಎಸ್.ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ಪ್ರೊ.ಮಲ್ಲು ಬಾಬಲಾದಿ ನಿರೂಪಿಸಿದರು. ಎಸ್ ಎಸ್.ಪೂಜಾರಿ ವಂದಿಸಿದರು.

ಹೊರ್ತಿಯ ರೇವಣಸಿದ್ಧೇಶ್ವರ ಹಳೇ ಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ 9ನೇ ವರ್ಷದ ಲಕ್ಷ ದೀಪೋತ್ಸವವನ್ನು ಸಾವಿರಾರು ಭಕ್ತರು ಬೆಳಗಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.