ADVERTISEMENT

‘ಲಿಂಬೆಗೆ ಯೋಗ್ಯ ಬೆಲೆ ಸಿಗಲಿ’

ಲಿಂಬೆ ಅಭಿವೃದ್ಧಿ ಮಂಡಳಿ ಸಭೆ: ಶಾಸಕ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 16:52 IST
Last Updated 17 ಡಿಸೆಂಬರ್ 2020, 16:52 IST

ಇಂಡಿ: ಲಿಂಬೆ ಬೆಳೆಗೆ ಯೋಗ್ಯ ಬೆಲೆ ಸಿಗುವಂತಾಗಲಿ. ಲಿಂಬೆ ಬಗ್ಗೆ ಸಂಶೋಧನೆಗಳು ನಡೆಯಲಿ ಎಂಬ ಸದುದ್ದೇಶದಿಂದ ಇಂಡಿ ತಾಲ್ಲೂಕಿನಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಲಿಂಬೆ ಅಭಿವೃದ್ಧಿ ಮಂಡಳಿಯ ಸಭಾ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಲಿಂಬೆ ಅಭಿವೃದ್ಧಿ ಮಂಡಳಿ ನಿರೀಕ್ಷೆ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲ. ಈ ವಿಷಯದ ಬಗ್ಗೆ ತೋಟಗಾರಿಕಾ ಸಚಿವರು ಹೆಚ್ಚಿನ ಗಮನ ನೀಡಬೇಕಿತ್ತು, ಅವರ ಕಾರ್ಯದ ಒತ್ತಡದಿಂದ ಗಮನ ಹರಿಸಲು ಆಗಿಲ್ಲ. ಅಭಿವೃದ್ಧಿ ಮೂರು ಸಂಕಲ್ಪದೊಂದಿಗೆ ನಡೆಯಬೇಕು ಎಂದರು.

ರೈತರ ಹಿತ ಕಾಯಬೇಕು. ಲಿಂಬೆ ಬೆಳೆಯನ್ನು ರಾಜ್ಯದಾದ್ಯಂತ ಬೆಳೆಯುವಂತೆ ಮಾಡಬೇಕು ಹಾಗೂ ಉತ್ತಮ ಮಾರುಕಟ್ಟೆ ಒದಗಿಸಬೇಕು. ಲಿಂಬೆ ದೀರ್ಘಾವಧಿಯ ಬೆಳೆಯಾಗಿದ್ದು, ಇದಕ್ಕೆ ಯೋಗ್ಯ ಬೆಲೆ ಸಿಗುವಂತಾಗಬೇಕು. ಲಿಂಬೆ ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಹೊಸ ಹೊಸ ಸಂಶೋಧನೆಗಳ ಮೂಲಕ ಸಹಾಯ ಮಾಡಬೇಕಿದೆ. ವಿದೇಶಗಳಿಗೆ ಅತಿ ಹೆಚ್ಚು ಲಿಂಬೆ ರಪ್ತು ನಮ್ಮ ದೇಶದಿಂದಲೇ ನಡೆಯುತ್ತಿರುವುದು ಹೆಮ್ಮೆ ತರುವ ಸಂಗತಿ ಎಂದರು. ತಡವಲಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಮಾತನಾಡಿದರು. ಶಂಕರಗೌಡ ಬಿರಾದಾರ, ಸಂಬಾಜಿರಾವ ಮಿಸಾಳೆ, ಎಂ.ಡಿ.ಸಪ್ಪಂಡಿ, ಮಹಾಂತೇಶ ಪಟ್ಟಣಶೆಟ್ಟಿ, ಭೀಮಾಶಖರ ಮುರಗುಂಡಿಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.