ADVERTISEMENT

ಬಸವನಬಾಗೇವಾಡಿ | ಲೋಕ ಅದಾಲತ್: ರಾಜಿ ಸಂಧಾನದ ಮೂಲಕ 1,996 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:56 IST
Last Updated 13 ಜುಲೈ 2025, 5:56 IST
ಬಸವನಬಾಗೇವಾಡಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು
ಬಸವನಬಾಗೇವಾಡಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು   

ಬಸವನಬಾಗೇವಾಡಿ: ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು.

ಲೋಕ ಅದಾಲತ್‌ನಲ್ಲಿ ನಾಲ್ಕೂ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿನ ಒಟ್ಟು 8,783 ಬಾಕಿ ಪ್ರಕರಣಗಳಲ್ಲಿ 2783 ಪ್ರಕರಣಗಳನ್ನು ಕೈಗೆತ್ತಿಕೊಂಡು ಅವುಗಳಲ್ಲಿ ಒಟ್ಟು 1996 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ, ಇಪಿ ಪ್ರಕರಣಗಳು, ಎಂವಿಸಿ, ಇಪಿ ಪ್ರಕರಣಗಳು ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.

ಅಲ್ಲದೇ ಪೂರ್ವಧಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬ್ಯಾಂಕಿನ ಪ್ರಕರಣಗಳು ಹಾಗೂ ಹೆಸ್ಕಾಂ ವಿಭಾಗದ ವಿದ್ಯುತ್‍ ಬಾಕಿ ಪಾವತಿ ಪ್ರಕರಣಗಳು ಸೇರಿ ಒಟ್ಟು 281052 ಪ್ರಕರಣಗಳಲ್ಲಿ 204470 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ADVERTISEMENT

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ. ಗೌಡ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಮುಸಲ್ಮಾರಿ, ಸದಸ್ಯ ಕಾರ್ಯದರ್ಶಿ ಅಮಿತ ಘಟ್ಟಿ ಹಾಗೂ ಹೆಚ್ಚುವರಿ ಸಿವಿಲ್‍ ನ್ಯಾಯಾಧೀಶ ಈರಪ್ಪ ಢವಳೇಶ್ವರ ಅವರು ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ವಕೀಲರಾದ ಜಿ.ಎಸ್.ಚಿಂಚೊಳ್ಳಿ, ಐ.ಎ.ಪರಮಗೊಂಡ, ವೈ.ಎನ್.ಲಂಕೇನ್ನವರ, ಬಿ.ಪಿ.ಪತ್ತಾರ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.