
ಚಡಚಣ: ಸಾಮೂಹಿಕ ಧಾರ್ಮಿಕ ವಿಧಿ-ವಿಧಾನಗಳ ಆಚರಣೆ ಹಾಗೂ ಪೂಜೆ ಪುನಸ್ಕಾರಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ಸಮಾಜದಲ್ಲಿ ಸಹಬಾಳ್ವೆ ಮೂಡಿಸಲು ಸಾಧ್ಯ ಎಂದು ತದ್ದೇವಾಡಿ ಹಿರೇಮಠದ ಮಹಾಂತೇಶ ಸ್ವಾಮೀಜಿ ಹೇಳಿದರು.
ಸಮೀಪದ ಬರಡೋಲ ಗ್ರಾಮದಲ್ಲಿ ಮಂಗಳವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಆಯೋಜಿಸಲಾದ ಸಾಮೂಹಿಕ ಅಷ್ಟಲಕ್ಷ್ಮೀ ಪೂಜೆ ಮತ್ತು ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ರೇಣುಕಾ ವಿ ಕಟಕದೊಂಡ ಕಾರ್ಯಕ್ರಮ ಉದ್ಘಾಟಿಸಿದರು. ಆರ್‌ಟಿಓ ರವಿ ಭೀಸೆ, ವಕೀಲ ಜಿ.ಎಸ್.ಪವಾರ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ ನಟರಾಜ್ ಎಲ್. ಎಮ್ ಪ್ರಾಸ್ತವಿಕವಾಗಿ ಮಾತನಾಡಿದರು. ಬಾಪೂರಾಯಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾದ್ಯಕ್ಷ ಶ್ರೀಶೈಲಗೌಡ ಬಿರಾದಾರ, ಮುಖಂಡರಾದ ಶ್ರೀಶೈಲ್ ಕುಂಬಾರ ಬಸವರಾಜ್ ತೊಡಕರ್, ಇನಾಂ ಸಾಬ್ ಹೊನಮೂರಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಒಕ್ಕೂಟ ಅಧ್ಯಕ್ಷರು, ವಲಯದ ಸೇವಾ ಪ್ರತಿನಿಧಿಗಳು ಇದ್ದರು.
ಈ ಸಂದರ್ಭದಲ್ಲಿ ಪತ್ರಿಕಾ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು ತಾಲ್ಲೂಕಿನ ಕೃಷಿ ಮೇಲ್ವಿಚಾರಕ ಸುದೀಪ್ ಎಸ್ ಕೆ ನಿರೂಪಿಸಿದರು. ವಲಯದ ಮೇಲ್ವಿಚಾರಕ ಮಾಂತೇಶ್ ವಂದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.