
ಸಾವು
(ಪ್ರಾತಿನಿಧಿಕ ಚಿತ್ರ)
ಮುದ್ದೇಬಿಹಾಳ : ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲ್ಲೂರ ಗ್ರಾಮದ ಕಾಲುವೆ ಪಕ್ಕದಲ್ಲಿರುವ ಬಸವೇಶ್ವರ ಗುಡಿಯ ಬಳಿ ಗುರುವಾರ ಸಂಜೆ ನಡೆದಿದೆ.
ಈ ಕುರಿತು ಮೃತನ ಪತ್ನಿ ರೇಣುಕಾ ಚಲವಾದಿ ಪೊಲೀಸರಿಗೆ ದೂರು ನೀಡಿದ್ದು ‘ನಮ್ಮೂರಲ್ಲಿ ಸಣ್ಣ ಪುಟ್ಟ ಎಲೆಕ್ಟ್ರಿ ಕಲ್ ಕೆಲಸಗಳನ್ನು ಮಾಡಿಕೊಂಡಿದ್ದ ನನ್ನ ಪತಿ ಗಣಪತಿ ಚಲವಾದಿ ಡಿ.18 ರಂದು ಸಾಯಂಕಾಲ 06-15 ಗಂಟೆ ಸುಮಾರಿಗೆ ನಮ್ಮೂರ ಕೆನಾಲ್ ಬಾಜು ಬಸವೇಶ್ವರ ಗುಡಿಯ ಹತ್ತಿರ ಇರುವ ಕರೆಂಟ್ ಕಂಬದ ಮೇಲೆ ಏನೋ ಕೆಲಸ ಮಾಡಲು ಹತ್ತಿದಾಗ ಆಕಸ್ಮಿಕವಾಗಿ ಕರೆಂಟ್ ತಗುಲಿ ತೀರಿಕೊಂಡಿರುತ್ತಾನೆ. ಹೊರತು ನನ್ನ ಗಂಡನ ಮರಣದಲ್ಲಿ ನನಗಾಗಲೀ, ನಮ್ಮ ಮನೆಯವರಿಗಾಗಲೀ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ, ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ,ದಲಿತಪರ ಸಂಘಟನೆ ಮುಖಂಡರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.